Page 7
ਆਦੇਸੁ ਤਿਸੈ ਆਦੇਸੁ ॥
ಆದೇಸು ತಿಸು ಆದೇಸು ||
ನಮಸ್ಕಾರಗಳು, ಆ ಸರ್ಗುಣ ಸ್ವರೂಪ ನಿರಂಕಾರರಿಗೆ ಮಾತ್ರ ನಮಸ್ಕಾರಗಳು.
ਆਦਿ ਅਨੀਲੁ ਅਨਾਦਿ ਅਨਾਹਤਿ ਜੁਗੁ ਜੁਗੁ ਏਕੋ ਵੇਸੁ ॥੨੯॥
ಆದಿ ಅನಿಲು ಅನಾದಿ ಅನಾಹತಿ ಜುಗು ಜುಗು ಏಕೋ ವೇಸು ||
ಅವರು ಎಲ್ಲದರ ಮೂಲ, ವರ್ಣರಹಿತ, ಶುದ್ಧ ರೂಪ, ಆದಿಯಿಲ್ಲದ, ಅಮರ ಮತ್ತು ಬದಲಾಗದ ರೂಪವಾಗಿದ್ದಾರೆ ॥29॥
ਏਕਾ ਮਾਈ ਜੁਗਤਿ ਵਿਆਈ ਤਿਨਿ ਚੇਲੇ ਪਰਵਾਣੁ ॥
ಏಕೋ ಮಾಯಿ ಜುಗತಿ ವಿಆಯಿ ತಿಣಿ ಚೆಲೆ ಪರ್ವಾಣು ||
ಒಬ್ಬ ಬ್ರಹ್ಮರ ಕೆಲವು ನಿಗೂಢ ಸಾಧನದ ಮೂಲಕ, ಮಾಯೆಯ ಪ್ರಸವದಿಂದ ಮೂವರು ಪುತ್ರರು ಜನಿಸಿದರು.
ਇਕੁ ਸੰਸਾਰੀ ਇਕੁ ਭੰਡਾਰੀ ਇਕੁ ਲਾਏ ਦੀਬਾਣੁ ॥
ಸಂಸಾರಿ ಇಕು ಇಕು ಭಂಡಾರಿ ಇಕು ಲಾಯೆ ದೀಬಾಣು ||
ಇವರಲ್ಲಿ ಒಬ್ಬ ಬ್ರಹ್ಮನು ಸೃಷ್ಟಿಕರ್ತರಾಗಿ, ಒಬ್ಬ ವಿಷ್ಣುವು ಜಗತ್ತನ್ನು ಪೋಷಿಸುವವರಾಗಿ ಮತ್ತು ಒಬ್ಬ ಶಿವನು ವಿಧ್ವಂಸಕರಾಗಿ ದರ್ಬಾರು ಹಾಕಿ ಕುಳಿತರು.
ਜਿਵ ਤਿਸੁ ਭਾਵੈ ਤਿਵੈ ਚਲਾਵੈ ਜਿਵ ਹੋਵੈ ਫੁਰਮਾਣੁ ॥
ಜಿವ್ ತಿಸು ಭಾವೈ ತಿವೈ ಚಲಾವೈ ಜಿವ್ ಹೋವೈ ಫುರ್ಮಾಣು ||
ಅಕಾಲ ಪುರುಷರು ಯಾವುದನ್ನು ಒಳ್ಳೆಯದೆಂದು ಭಾವಿಸುತ್ತಾರೋ ಅದೇ ರೀತಿಯಲ್ಲಿ ಅವರು ಈ ಮೂವರನ್ನು ನಡೆಸುತ್ತಾರೆ ಮತ್ತು ಅವರ ಆದೇಶದಂತೆ ಈ ದೇವರುಗಳು ಅದೇ ಕೆಲಸವನ್ನು ಮಾಡುತ್ತಾರೆ.
ਓਹੁ ਵੇਖੈ ਓਨਾ ਨਦਰਿ ਨ ਆਵੈ ਬਹੁਤਾ ਏਹੁ ਵਿਡਾਣੁ ॥
ಓಹು ವೇಖೈ ಒನಾ ನದರಿ ನ ಆವೈ ಬಹುತಾ ಎಹು ವಿಡಾಣು ||
ಆ ಅಕಾಲ ಪುರುಷರು ಆದಿ ಮತ್ತು ಅಂತ್ಯದಲ್ಲಿ ಈ ಮೂವರನ್ನು ನೋಡುತ್ತಿದ್ದಾರೆ, ಆದರೆ ಅವರು ಆ ಅದೃಶ್ಯ ರೂಪದ ನಿರಂಕಾರರನ್ನು ನೋಡುವುದಿಲ್ಲ, ಇದು ಆಶ್ಚರ್ಯಕರ ಸಂಗತಿಯಾಗಿದೆ.
ਆਦੇਸੁ ਤਿਸੈ ਆਦੇਸੁ ॥
ಆದೇಸು ತಿಸೈ ಆದೇಸು ||
ನಮಸ್ಕಾರಗಳು, ಆ ಸರ್ಗುಣ ಸ್ವರೂಪ ನಿರಂಕಾರರಿಗೆ ಮಾತ್ರ ನಮಸ್ಕಾರಗಳು.
ਆਦਿ ਅਨੀਲੁ ਅਨਾਦਿ ਅਨਾਹਤਿ ਜੁਗੁ ਜੁਗੁ ਏਕੋ ਵੇਸੁ ॥੩੦॥
ಆದಿ ಅನಿಲು ಅನಾದಿ ಅನಾಹತಿ ಜುಗು ಜುಗು ಏಕೋ ವೇಸು। ॥30॥
ಅವರು ಎಲ್ಲರ ಮೂಲ, ವರ್ಣರಹಿತ, ಪವಿತ್ರ ಸ್ವರೂಪ, ಆದಿಯಿಲ್ಲದ, ಅಮರ ಮತ್ತು ಬದಲಾಗದ ಸ್ವರೂಪವಾಗಿದ್ದಾರೆ.
ਆਸਣੁ ਲੋਇ ਲੋਇ ਭੰਡਾਰ ॥
ಆಸಣು ಲೋಯಿ ಲೋಯಿ ಭಂಡಾರ್ ||
ಅವರ ಆಸನವು ಪ್ರತಿಯೊಂದು ಲೋಕದಲ್ಲಿದೆ ಮತ್ತು ಪ್ರತಿಯೊಂದು ಲೋಕವು ಅವರ ನಿಧಿಯನ್ನು ಹೊಂದಿದೆ.
ਜੋ ਕਿਛੁ ਪਾਇਆ ਸੁ ਏਕਾ ਵਾਰ ॥
ಜೋ ಕಿಛು ಪಾಯಿಆ ಸು ಏಕಾ ವಾರ್ ||
ಆ ದೇವರು ಎಲ್ಲಾ ಸಂಪತ್ತನ್ನೂ ಒಂದೇ ಬಾರಿಗೆ ಕೊಟ್ಟಿದ್ದಾರೆ.
ਕਰਿ ਕਰਿ ਵੇਖੈ ਸਿਰਜਣਹਾਰੁ ॥
ಕರಿ ಕರಿ ವೇಖೈ ಸಿರಜಣಹಾರೂ ॥
ಆ ಸೃಷ್ಟಿಕರ್ತರು ಸೃಷ್ಟಿಯನ್ನು ರಚಿಸಿ ಅದನ್ನು ನೋಡುತ್ತಿದ್ದಾರೆ.
ਨਾਨਕ ਸਚੇ ਕੀ ਸਾਚੀ ਕਾਰ ॥
ನಾನಕ್, ಸಚೆ ಕಿ ಸಾಚೆ ಕಾರ್ ||
ಓ ನಾನಕ್! ಆ ಸತ್ಯಸ್ವರೂಪರಾದ ನಿರಂಕಾರರ ಸಂಪೂರ್ಣ ರಚೆನೆಯೂ ಸತ್ಯ.
ਆਦੇਸੁ ਤਿਸੈ ਆਦੇਸੁ ॥
ಆದೇಸು ತಿಸೈ ಆದೇಸು ||
ನಮಸ್ಕಾರಗಳು, ಆ ಸರ್ಗುಣ ಸ್ವರೂಪ ನಿರಂಕಾರರಿಗೆ ಮಾತ್ರ ನಮಸ್ಕಾರಗಳು.
ਆਦਿ ਅਨੀਲੁ ਅਨਾਦਿ ਅਨਾਹਤਿ ਜੁਗੁ ਜੁਗੁ ਏਕੋ ਵੇਸੁ ॥੩੧॥
ಆದಿ ಅನಿಲು ಅನಾದಿ ಅನಾಹತಿ ಜುಗು ಜುಗು ಏಕೋ ವೇಸು||
ಅವರು ಎಲ್ಲರ ಮೂಲ, ವರ್ಣರಹಿತ, ಪವಿತ್ರ ಸ್ವರೂಪ ಆದಿಯಿಲ್ಲದ, ಅಮರ ಮತ್ತು ಬದಲಾಗದ ಸ್ವರೂಪವಾಗಿದ್ದಾರೆ.॥31॥
ਇਕ ਦੂ ਜੀਭੌ ਲਖ ਹੋਹਿ ਲਖ ਹੋਵਹਿ ਲਖ ਵੀਸ ॥
ಎಕ್ ದೋ ಜೀಭೈ ಲಖ್ ಹೋಹಿ ಲಖ್ ಹೋವಹಿ ಲಖ್ ವೀಸ್ ||
ಒಂದು ನಾಲಿಗೆ ಒಂದು ಲಕ್ಷ ನಾಲಿಗೆ ಆಗುತ್ತದೆ, ನಂತರ ಒಂದು ಲಕ್ಷ ಇಪ್ಪತ್ತು ಲಕ್ಷ ಆಗುತ್ತದೆ.
ਲਖੁ ਲਖੁ ਗੇੜਾ ਆਖੀਅਹਿ ਏਕੁ ਨਾਮੁ ਜਗਦੀਸ ॥
ಲಖು ಲಖು ಗೇಡ ಆಖಿಆಹಿ ಏಕು ನಾಮು ಜಗದೀಸ್ ||
ನಂತರ ಆ ಜಗದೀಶ್ವರನ ಹೆಸರನ್ನು ಪ್ರತಿ ನಾಲಿಗೆಯಿಂದ ಲಕ್ಷ - ಲಕ್ಷ ಬಾರಿ ಉಚ್ಚರಿಸಿ, ಅಂದರೆ ಆ ಭಗವಂತನ ಹೆಸರನ್ನು ಪ್ರತಿದಿನ ಪಠಿಸಬೇಕು.
ਏਤੁ ਰਾਹਿ ਪਤਿ ਪਵੜੀਆ ਚੜੀਐ ਹੋਇ ਇਕੀਸ ॥
ಎತು ರಾಹಿ ಪತಿ ಪವಡೀಆ ಚಡಿಯೇ ಹೋಯಿ ಇಕೀಸ್ ||
ಈ ಮಾರ್ಗದ ಮೂಲಕ ಪತಿ-ದೇವರನ್ನು ಭೇಟಿಯಾಗಲು ಮಾಡಿದ ಹೆಸರಿನ ರೂಪದ ಮೆಟ್ಟಿಲುಗಳನ್ನು ಏರುವ ಮೂಲಕ ಮಾತ್ರ ಆ ಅನನ್ಯ ಭಗವಂತನನ್ನು ಭೇಟಿ ಮಾಡಬಹುದು.
ਸੁਣਿ ਗਲਾ ਆਕਾਸ ਕੀ ਕੀਟਾ ਆਈ ਰੀਸ ॥
ಸುನಿ ಗಲಾ ಆಕಾಸ್ ಕಿ ಕೀಟಾ ಆಯಿ ರೀಸ್ ||
ಅಂದಹಾಗೆ, ಬ್ರಹ್ಮಜ್ಞಾನಿಗಳ ಮಹತ್ಕಾರ್ಯಗಳನ್ನು ಕೇಳಿದ ನಂತರ ನಿಕೃಷ್ಟ ಜೀವಿಗಳು ಸಹ ದೇಹ ಪ್ರಜ್ಞೆಯನ್ನು ಅನುಸರಿಸಲು ಬಯಸುತ್ತಾರೆ.
ਨਾਨਕ ਨਦਰੀ ਪਾਈਐ ਕੂੜੀ ਕੂੜੈ ਠੀਸ ॥੩੨॥
ನಾನಕ್ ನದರಿ ಪಾಯಿಎ ಕೂಡಿ ಕೊಡೈ ಟ್ಹೀಸ್ ॥32॥
ಆದರೆ ಗುರುನಾನಕ್ ಜೀ ಹೇಳುತ್ತಾರೆ, ಆ ದೇವರು ಅವರ ಕೃಪೆಯಿಂದ ಮಾತ್ರ ಪ್ರಾಪ್ತಿಯಾಗುತ್ತಾರೆ, ಇಲ್ಲದಿದ್ದರೆ ಇವು ಕೇವಲ ಸುಳ್ಳು ಜನರ ಸುಳ್ಳು ಮಾತುಗಳು. ॥ 32 ॥
ਆਖਣਿ ਜੋਰੁ ਚੁਪੈ ਨਹ ਜੋਰੁ ॥
ಆಖಣಿ ಜೋರಿ ಚುಪೈ ನ ಜೋರು ||
ಅಕಾಲ ಪುರುಷರ ಆಶೀರ್ವಾದವಿಲ್ಲದೆ, ಈ ಜೀವಿಯು ಏನನ್ನೂ ಹೇಳಲು ಮತ್ತು ಮೌನವಾಗಿರಲು ಶಕ್ತಿಯನ್ನು ಹೊಂದಿಲ್ಲ, ಅಂದರೆ, ರಚನೆಯನ್ನು ನಡೆಸಲು ಜೀವಿಗಳ ನಿಯಂತ್ರಣದಲ್ಲಿಲ್ಲ.
ਜੋਰੁ ਨ ਮੰਗਣਿ ਦੇਣਿ ਨ ਜੋਰੁ ॥
ಜೋರು ನ ಮಂಗಣಿ ದೇಣಿ ನ ಜೋರು ||
ಅವರಿಗೆ ಕೇಳುವ ಶಕ್ತಿಯೂ ಇಲ್ಲ, ಏನನ್ನೂ ಕೊಡುವ ಸಾಮರ್ಥ್ಯವೂ ಇಲ್ಲ.
ਜੋਰੁ ਨ ਜੀਵਣਿ ਮਰਣਿ ਨਹ ਜੋਰੁ ॥
ಜೋರು ನ ಜೀವಣಿ ಮರಣಿ ನಃ ಜೋರು ||
ಜೀವಿಯು ನಾನು ಬದುಕಬೇಕೆಂದು ಬಯಸಿದರೂ, ಅವನಲ್ಲಿ ಯಾವುದೇ ಶಕ್ತಿಯಿಲ್ಲ, ಏಕೆಂದರೆ ಅನೇಕ ಬಾರಿ ಮನುಷ್ಯ ಚಿಕಿತ್ಸೆಯಲ್ಲಿಯೇ ಸಾಯುತ್ತಾನೆ, ಸಾಯುವುದು ಸಹ ಅವನ ನಿಯಂತ್ರಣದಲ್ಲಿಲ್ಲ.
ਜੋਰੁ ਨ ਰਾਜਿ ਮਾਲਿ ਮਨਿ ਸੋਰੁ ॥
ಜೋರು ನ ರಾಜಿ ಮಾಲಿ ಮನಿ ಸೋರು ||
ಯಾವ ಸಂಪತ್ತು ಮತ್ತು ವೈಭವವನ್ನು ಪಡೆಯುವುದರಿಂದ ಮನಸ್ಸಿನಲ್ಲಿ ಹೆಮ್ಮೆ ಬರುತ್ತದೆ, ಅದನ್ನು ಪಡೆಯುವಲ್ಲಿ ಜೀವಕ್ಕೆ ಶಕ್ತಿ ಇಲ್ಲ.
ਜੋਰੁ ਨ ਸੁਰਤੀ ਗਿਆਨਿ ਵੀਚਾਰਿ ॥
ಜೋರು ನ ಸುರತಿ ಗಿಅನಿ ವೀಚಾರಿ ||
ಶ್ರುತಿ ವೇದಗಳ ಜ್ಞಾನವನ್ನು ಪರಿಗಣಿಸುವ ಬಲವೂ ಅದಕ್ಕೆ ಇಲ್ಲ.
ਜੋਰੁ ਨ ਜੁਗਤੀ ਛੁਟੈ ਸੰਸਾਰੁ ॥
ಜೋರು ನ ಜುಗತಿ ಛುಟೈ ಸಂಸಾರು ||
ಪ್ರಪಂಚದಿಂದ ಮುಕ್ತವಾಗಲು ಷಟ್-ಶಾಸ್ತ್ರಗಳಲ್ಲಿ ನೀಡಲಾದ ಸಲಹೆಗಳನ್ನು ಗ್ರಹಿಸುವ ಶಕ್ತಿಯೂ ಅದಕ್ಕಿಲ್ಲ.
ਜਿਸੁ ਹਥਿ ਜੋਰੁ ਕਰਿ ਵੇਖੈ ਸੋਇ ॥
ಜಿಯು ಹಥಿ ಜೋರು ಕರೈ ವೇಖೈ ಸೋಯಿ ||
ತನ್ನ ಕೈಯಲ್ಲಿ ಶಕ್ತಿಯನ್ನು ಹೊಂದಿರುವ ಅಕಾಲ ಪುರುಷರು ಮಾತ್ರ ಸೃಷ್ಟಿಸುತ್ತಾರೆ ಮತ್ತು ನೋಡುತ್ತಾರೆ.
ਨਾਨਕ ਉਤਮੁ ਨੀਚੁ ਨ ਕੋਇ ॥੩੩॥
ನಾನಕ್ ಉತಮು ನೀಚು ನ ಕೋಯಿ ||೩೩॥
ಹಾಗಾದರೆ ನಾವು ತಿಳಿದುಕೊಳ್ಳಬೇಕಾದದ್ದು ಇಷ್ಟೇ, ಈ ಜಗತ್ತಿನಲ್ಲಿ ಯಾರೂ ಸ್ವಇಚ್ಛೆಯಿಂದ ಕೆಳಗಿನಮಟ್ಟದಲ್ಲಿ ಅಥವಾ ಅತ್ಯುತ್ತಮಟ್ಟದಲ್ಲಿ ಇಲ್ಲ, ಭಗವಂತ ಎಲ್ಲರನ್ನೂ ಅವರವರ ಕರ್ಮಾನುಸಾರವಾಗಿ ರಕ್ಷಿಸುತ್ತಾರೆ ಎಂದು ಗುರುನಾನಕ್ ಜಿ ಹೇಳುತ್ತಾರೆ॥ 33॥
ਰਾਤੀ ਰੁਤੀ ਥਿਤੀ ਵਾਰ ॥
ರಾತ್ ರುತಿ ತಿಥಿ ವಾರ್ ||
ರಾತ್ರಿಗಳು, ಋತುಗಳು, ದಿನಾಂಕಗಳು, ವಾರದ ದಿನಗಳು,
ਪਵਣ ਪਾਣੀ ਅਗਨੀ ਪਾਤਾਲ ॥
ಪವಣು ಪಾಣಿ ಅಗ್ನಿ ಪಾತಾಲ್ ||
ಗಾಳಿ, ನೀರು, ಅಗ್ನಿ ಮತ್ತು ಪಾತಾಳ ಲೋಕ ಇತ್ಯಾದಿಗಳೆಲ್ಲವೂ ಲೋಕಗಳು.
ਤਿਸੁ ਵਿਚਿ ਧਰਤੀ ਥਾਪਿ ਰਖੀ ਧਰਮ ਸਾਲ ॥
ತಿಸು ವಿಚಿ ಧರತಿ ಥಾಪಿ ರಖಿ ಧರಮ್ ಸಾಲ್ ॥
ಸೃಷ್ಟಿಕರ್ತರು ಭೂಮಿಯ ರೂಪದಲ್ಲಿ ಧರ್ಮಶಾಲೆಯನ್ನು ಸ್ಥಾಪಿಸಿದ್ದಾರೆ, ಇದನ್ನೇ ಕರ್ಮಭೂಮಿ ಎಂದು ಕರೆಯಲಾಗುತ್ತದೆ.
ਤਿਸੁ ਵਿਚਿ ਜੀਅ ਜੁਗਤਿ ਕੇ ਰੰਗ ॥
ತಿಸು ವಿಚಿ ಜೀಯ ಯುಗತಿ ಕೆ ಸಂಗ್ ||
ಆ ಧರ್ಮಶಾಲೆಯಲ್ಲಿ ಅನೇಕ ವಿಧದ ಜೀವಿಗಳಿವೆ, ಅವರು ಅನೇಕ ರೀತಿಯ ಧಾರ್ಮಿಕ ಕಾರ್ಯಗಳ ಪೂಜಾ ವಿಧಾನಗಳನ್ನು ಹೊಂದಿದ್ದಾರೆ ಮತ್ತು ಅವುಗಳು ಬಿಳಿ ಮತ್ತು ಕಪ್ಪು ರೀತಿಯ ಅನೇಕ ಬಣ್ಣಗಳನ್ನು ಹೊಂದಿವೆ.
ਤਿਨ ਕੇ ਨਾਮ ਅਨੇਕ ਅਨੰਤ ॥
ತಿಸು ಕೆ ನಾಮ್ ಅನೇಕ್ ಅನಂತ್ ||
ಅವರಿಗೆ ಅನೇಕ ಅನಂತ ಹೆಸರುಗಳಿವೆ.
ਕਰਮੀ ਕਰਮੀ ਹੋਇ ਵੀਚਾਰੁ ॥
ಕರಮಿ ಕರಮಿ ಹೋಯಿ ವೀಚಾರು ||
ಜಗತ್ತಿನಲ್ಲಿ ವಿಹರಿಸುತ್ತಿರುವ ಅನೇಕ ಜೀವಿಗಳನ್ನು ಅವರ ಶುಭ ಅಶುಭ ಕಾರ್ಯಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.
ਸਚਾ ਆਪਿ ਸਚਾ ਦਰਬਾਰੁ ॥
ಸಚಾ ಆಪಿ ಸಚಾ ದರಬಾರು ॥
ಇವುಗಳನ್ನು ಪರಿಗಣಿಸುವ ಆ ನಿರಂಕಾರರು ಸ್ವತಃವೂ ಸತ್ಯ ಹಾಗೂ ಅವರ ಆಸ್ಥಾನವೂ ಸತ್ಯದ್ದಾಗಿದೆ.
ਤਿਥੈ ਸੋਹਨਿ ਪੰਚ ਪਰਵਾਣੁ ॥
ತಿಥೈ ಸೋಹನಿ ಪಾಂಚ್ ಪರ್ವಾಣು ||
ಅವರ ಆಸ್ಥಾನದಲ್ಲಿ ಪ್ರಾಮಾಣಿಕ ಜ್ಞಾನಿಗಳು ಮಾತ್ರ ಶೋಭಾಯಮಾನರಾಗಿರುತ್ತಾರೆ.
ਨਦਰੀ ਕਰਮਿ ਪਵੈ ਨੀਸਾਣੁ ॥
ನದರಿ ಕರಿಮಿ ಪವೈ ನೀಸಾಣು ||
ಅವರ ಹಣೆಯಲ್ಲಿ ದಯಾಮಯನಾದ ದೇವರ ಕೃಪೆಯ ಗುರುತನ್ನು ಗುರುತಿಸಲಾಗಿದೆ.
ਕਚ ਪਕਾਈ ਓਥੈ ਪਾਇ ॥
ಕಚ್ ಪಖಾಯೋ ಓತೆ ಖಾಯಿ ||
ಭಗವಂತನ ಆಸ್ಥಾನದಲ್ಲಿ ಕಚ್ಚಾ-ಪಕ್ವತೆಯ ಪರೀಕ್ಷೆ ಇದೆ.
ਨਾਨਕ ਗਇਆ ਜਾਪੈ ਜਾਇ ॥੩੪॥
ನಾನಕ್ ಗಯಿಆ ಜಾಪೈ ಜಾಯಿ || ೩೪॥
ಹೇ ನಾನಕ್ ! ಈ ಸತ್ಯವನ್ನು ಅಲ್ಲಿಗೆ ಹೋಗುವುದರ ಮೂಲಕ ನಿರ್ಧರಿಸಲಾಗುತ್ತದೆ.॥34॥
ਧਰਮ ਖੰਡ ਕਾ ਏਹੋ ਧਰਮੁ ॥
ಧರಂ ಖಂಡ್ ಕಾ ಎಹೋ ಧರಮು ||
(ಆಚಾರಗಳಲ್ಲಿ) ಇದು ಧರ್ಮಖಂಡದ ನಿಯಮವಾಗಿದೆ; ಹಿಂದಿನ ಸಾಲುಗಳಲ್ಲಿ ಹೇಳಲಾಗಿದೆ.
ਗਿਆਨ ਖੰਡ ਕਾ ਆਖਹੁ ਕਰਮੁ ॥
ಗಿಯಾನ್ ಖಂಡ್ ಕಾ ಆಖಹು ಕರಮು ॥
(ಗುರು ನಾನಕ್ ಜಿ) ಈಗ ಜ್ಞಾನ ಖಂಡದ ಆಚರಣೆಯನ್ನು ವಿವರಿಸೋಣ.
ਕੇਤੇ ਪਵਣ ਪਾਣੀ ਵੈਸੰਤਰ ਕੇਤੇ ਕਾਨ ਮਹੇਸ ॥
ಕೇತೆ ಪವಣ್ ಪಾಣಿ ವೈಸಂತರ್ ಕೇತೆ ಕಾನ್ ಮಹೇಸ್ ||
(ಈ ಜಗತ್ತಿನಲ್ಲಿ) ಗಾಳಿ, ನೀರು, ಬೆಂಕಿ ಮತ್ತು ಕೃಷ್ಣ ಮತ್ತು ರುದ್ರರ (ಶಿವ) ಹಲವು ರೂಪಗಳಿವೆ.
ਕੇਤੇ ਬਰਮੇ ਘਾੜਤਿ ਘੜੀਅਹਿ ਰੂਪ ਰੰਗ ਕੇ ਵੇਸ ॥
ಕೇತೆ ಭರ್ಮೈ ಘಾಡತಿ ಘಡಿಆಹಿ ರೂಪ್ ರಂಗ್ ಕೇ ವೇಸ್ ||
ಎಷ್ಟೋ ಬ್ರಹ್ಮರು ಈ ಪ್ರಪಂಚದಲ್ಲಿ ಅನೇಕ ರೂಪ ಮತ್ತು ಬಣ್ಣಗಳ ವೇಷದಲ್ಲಿ ಜೀವಿಗಳನ್ನು ಸೃಷ್ಟಿಸುತ್ತಾರೆ.
ਕੇਤੀਆ ਕਰਮ ਭੂਮੀ ਮੇਰ ਕੇਤੇ ਕੇਤੇ ਧੂ ਉਪਦੇਸ ॥
ಕೇತಿಯಾ ಕರಂ ಭೂಮಿ ಮೇರ್ ಕೇತೇ ಕೇತೇ ಧು ಅಪ್ಡೇಸ್ ॥
ಎಷ್ಟೋ ಕರ್ಮ-ಭೂಮಿಗಳು, ಸುಮೇರು - ಪರ್ವತಗಳು, ಧ್ರುವ ಭಕ್ತರು ಮತ್ತು ಅವರ ಉಪದೇಶಕರು ಇದ್ದಾರೆ.
ਕੇਤੇ ਇੰਦ ਚੰਦ ਸੂਰ ਕੇਤੇ ਕੇਤੇ ਮੰਡਲ ਦੇਸ ॥
ಕೇತೆ ಇಂದ್ ಚಂದ್ ಸೂರ್ ಕೇತೆ ಕೇತೆ ಮಂಡಲ್ ದೇಸ್ ||
ಹಲವಾರು ಇಂದ್ರರು ಮತ್ತು ಚಂದ್ರರು, ಹಲವಾರು ಸೂರ್ಯರು, ಹಲವಾರು ವೃತ್ತಗಳು ಮತ್ತು ವೃತಾಂತರ್ಗತ ದೇಶಗಳಿವೆ.
ਕੇਤੇ ਸਿਧ ਬੁਧ ਨਾਥ ਕੇਤੇ ਕੇਤੇ ਦੇਵੀ ਵੇਸ ॥
ಕೇತೆ ಸಿದ್ಹ್ ಬುದ್ಹ್ ನಾಥ್ ಕೇತೆ ಕೇತೆ ದೇವಿ ವೇಸ್ ||
ಅನೇಕ ಸಿದ್ಧರು, ವಿದ್ವಾಂಸರು ಮತ್ತು ನಾಥರಿದ್ದಾರೆ, ದೇವತೆಗಳ ಅನೇಕ ರೂಪಗಳಿವೆ.
ਕੇਤੇ ਦੇਵ ਦਾਨਵ ਮੁਨਿ ਕੇਤੇ ਕੇਤੇ ਰਤਨ ਸਮੁੰਦ ॥
ಕೇತೆ ದೇವ್ ದಾನವ್ ಮುನಿ ಕೇತೆ ಕೇತೆ ರತನ್ ಸಮುಂದ್ ||
ಅನೇಕ ದೇವತೆಗಳು, ರಾಕ್ಷಸರು ಮತ್ತು ಋಷಿಗಳು ಇದ್ದಾರೆ ಮತ್ತು ರತ್ನಗಳಿಂದ ತುಂಬಿದ ಅನೇಕ ಸಾಗರಗಳಿವೆ.
ਕੇਤੀਆ ਖਾਣੀ ਕੇਤੀਆ ਬਾਣੀ ਕੇਤੇ ਪਾਤ ਨਰਿੰਦ ॥
ಕೇತಿಯಾ ಖಾಣಿ ಕೇತಿಯಾ ಬಾಣಿ ಕೇತೇ ಪಾತ್ ನರಿಂದ್ ॥
ಹಲವಾರು ಉತ್ಪತ್ತಿಯ ಮೂಲಗಳು (ಅಂಡಜ್-ಜರಾಯುಜಾದಿ), ಹಲವು ರೀತಿಯ ಮಾತುಗಳು (ಪರಾ, ಪಶ್ಯಂತಿ ಇತ್ಯಾದಿ), ಹಲವಾರು ಚಕ್ರವರ್ತಿಗಳು ಮತ್ತು ಹಲವಾರು ರಾಜರು ಇದ್ದಾರೆ.
ਕੇਤੀਆ ਸੁਰਤੀ ਸੇਵਕ ਕੇਤੇ ਨਾਨਕ ਅੰਤੁ ਨ ਅੰਤੁ ॥੩੫॥
ಕೇತಿಯ ಸುರತಿ ಸೇವಕ್ ಕೇತೆ ನಾನಕ್ ಅಂತು ನ ಅಂತು || ೩೫||
ಎಷ್ಟೊಂದು ವೇದಗಳು-ಶ್ರುತಿಗಳಿವೆ, ಅವರ ಎಷ್ಟೋ ಮಂದಿ ಅವರ ಸೇವಕರು, ಅವರ ಸೃಷ್ಟಿಗೆ ಅಂತ್ಯವಿಲ್ಲ ಎಂದು ಗುರುನಾನಕ್ ಜಿ ಹೇಳುತ್ತಾರೆ; ಇವೆಲ್ಲವುಗಳ ಅಂತ್ಯವು ಜ್ಞಾನದ ಪ್ರದೇಶಕ್ಕೆ ಹೋಗುವುದರಿಂದ ಅರ್ಥವಾಗುತ್ತದೆ, ಅಲ್ಲಿ ಆತ್ಮವು ಜ್ಞಾನವನ್ನು ಪಡೆಯುತ್ತದೆ. ॥ 35 ॥
ਗਿਆਨ ਖੰਡ ਮਹਿ ਗਿਆਨੁ ਪਰਚੰਡੁ ॥
ಗಿಯಾನ್ ಖಂಡ್ ಮಹಿ ಗಿಯಾನು ಪರಚಂಡು ॥
ಜ್ಞಾನ ಖಂಡದಲ್ಲಿ ಹೇಳಲಾದ ಜ್ಞಾನವು ಪ್ರಬಲವಾಗಿದೆ.
ਤਿਥੈ ਨਾਦ ਬਿਨੋਦ ਕੋਡ ਅਨੰਦੁ ॥
ತಿಥೈ ನಾದ್ ಬಿನೋದ್ ಕೋಡ್ ಆನಂದು ||
ಈ ವಿಭಾಗದಲ್ಲಿ ಸುಮಧುರ, ಸಂತೋಷದಾಯಕ ಮತ್ತು ಮೆಚ್ಚುಗೆಯ ಆನಂದವಿದೆ.