Guru Granth Sahib Translation Project

Guru granth sahib kannada page 1

Page 1

ੴ ਸਤਿ ਨਾਮੁ ਕਰਤਾ ਪੁਰਖੁ ਨਿਰਭਉ ਨਿਰਵੈਰੁ ਅਕਾਲ ਮੂਰਤਿ ਅਜੂਨੀ ਸੈਭੰ ਗੁਰ ਪ੍ਰਸਾਦਿ ॥ ಸತೀನಾಮು ಕರ್ತಾ ಪುರಖು ನಿರ್ಭೌ ನಿರ್ವೈರು ಅಕಾಲ್ ಮೂರತಿ ಅಜುನೀ ಸಾಯಿಭಂ ಗುರುಪ್ರಸಾದಿ॥ ದೈವೀ ಶಕ್ತಿಯು ಒಬ್ಬರೇ, ಅವರ ಹೆಸರು ' ಅಸ್ತಿತ್ವದಲ್ಲಿ ರುವವರು' ಎಂದಾಗಿದ್ದು ಅವರು ಬ್ರಹ್ಮಾಂಡದ ಸೃಷ್ಟಿಕರ್ತರಾಗಿದ್ದಾರೆ, (ಕರ್ತಾ) ಸರ್ವವ್ಯಾಪಿ, ಭಯ ರಹಿತ (ನಿರ್ಭಯ), ಶತ್ರುತ್ವ ರಹಿತ (ನಿರ್ವೈರ್), ಅವರ ರೂಪವು ಕಾಲವನ್ನು ಮೀರಿದೆ, (ಭಾವ, ಅವರ ದೇಹವು ನಾಶವಾಗುವುದಿಲ್ಲ), ಅವರು ಯೋನಿಯಲ್ಲಿ ಬರುವುದಿಲ್ಲ,ಅವರ ಬೆಳಕು ತನ್ನಿಂದಲೇ ಬಂದಿದೆ ಮತ್ತು ಇದು ಸದ್ಗುರುವಿನ ಅನುಗ್ರಹದಿಂದ ಪಡೆಯಲ್ಪಟ್ಟಿದೆ.
॥ ਜਪੁ ॥ ಜಪು॥ ಜಪಿಸಿ (ಇದನ್ನು ಗುರುಗಳ ಭಾಷಣದ ಶೀರ್ಷಿಕೆ ಎಂದೂ ಪರಿಗಣಿಸಲಾಗುತ್ತದೆ.)
ਆਦਿ ਸਚੁ ਜੁਗਾਦਿ ਸਚੁ ॥ ಆದಿ ಸಚು ಜುಗಾದಿ ಸಚು॥ ನಿರಂಕಾರ(ಅಕಾಲ ಪುರುಷ) ಬ್ರಹ್ಮಾಂಡದ ಸೃಷ್ಟಿಗೆ ಮೊದಲು ಸತ್ಯ ಆಗಿದ್ದರು, ಯುಗಗಳ ಆರಂಭದಲ್ಲಿಯೂ ಸತ್ಯ (ಸ್ವರೂಪ) ಆಗಿದ್ದರು.
ਹੈ ਭੀ ਸਚੁ ਨਾਨਕ ਹੋਸੀ ਭੀ ਸਚੁ ॥੧॥ ಹೈ ಭೀ ಸಚು ನಾನಕ್ ಹೋಸೀ ಭೀ ಸಚು .॥೧॥ ಈಗ ಅವರು ಪ್ರಸ್ತುತದಲ್ಲಿಯೂ ಇದ್ದಾರೆ ಎಂದು ಶ್ರೀ ಗುರುನಾನಕ್ ದೇವ್ ಜಿ ಹೇಳುತ್ತಾರೆ, ಭವಿಷ್ಯದಲ್ಲಿಯೂ ಅದೇ ಸ್ಯತ್ಯಸ್ವರೂಪ ನಿರಂಕಾರರು ಅಸ್ತಿತ್ವದಲ್ಲಿರುತ್ತಾರೆ ॥1॥
ਸੋਚੈ ਸੋਚਿ ਨ ਹੋਵਈ ਜੇ ਸੋਚੀ ਲਖ ਵਾਰ ॥ ಸೋಚೈ ಸೋಚ್ ನ ಹೋವಯ್ ಜೆ ಸೋಚೀ ಲಖ್ ವಾರ್॥ ಒಂದು ಮಿಲಿಯನ್ ಕೋಟಿ ಬಾರಿ ಶೌಚ (ಸ್ನಾನ ಇತ್ಯಾದಿ) ಮಾಡಿದರೂ, ಈ ದೇಹದ ಬಾಹ್ಯ ಸ್ನಾನದಿಂದ ಮನಸ್ಸಿನ ಶುದ್ಧತೆಯನ್ನು ಸಾಧಿಸಲಾಗುವುದಿಲ್ಲ. ಮನಸ್ಸಿನ ಪರಿಶುದ್ಧತೆ ಇಲ್ಲದಿದ್ದರೆ ದೇವರನ್ನು (ವಾಹೆಗುರು) ಪಡೆಯುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ.
ਚੁਪੈ ਚੁਪ ਨ ਹੋਵਈ ਜੇ ਲਾਇ ਰਹਾ ਲਿਵ ਤਾਰ ॥ ಚುಪೈ ಚುಪ್ ನಾ ಹೋವೈ ಜೆ ಲಾಯಿ ರಹಾ ಲಿವ್ ತಾರ್॥ ಸುಳ್ಳು ದುರ್ಗುಣಗಳನ್ನು ಮನಸ್ಸಿನಿಂದ ತೆಗೆದುಹಾಕುವವರೆಗೆ; ಏಕಾಗ್ರವಾದ ಸಮಾಧಿಯನ್ನು ಸಾಧಿಸಿ ಯಾರಾದರೂ ಬಾಯಿಯಿಂದ ಮೌನವನ್ನು ವಹಿಸಿದರೂ, ಮನಸ್ಸಿನ ಶಾಂತಿ (ಮೌನ) ಸಾಧಿಸಲಾಗುವುದಿಲ್ಲ;
ਭੁਖਿਆ ਭੁਖ ਨ ਉਤਰੀ ਜੇ ਬੰਨਾ ਪੁਰੀਆ ਭਾਰ ॥ ಭುಕಿಯ ಭುಕ್ ನ ಉತರೀ ಜೆ ಬಂನಾ ಪುರಿಆ ಭಾರ್ || ಓ ಜೀವಿ! ನೀವು ಈ ಜಗತ್ತಿನಲ್ಲಿ ಎಷ್ಟೇ ಭೋಗ್ಯ ವಸ್ತುಗಳನ್ನು ಸೇವಿಸಿದರೂ, ಎಷ್ಟು ಆಚರಣೆಗಳು ಮತ್ತು ಉಪವಾಸಗಗಳಂತಹ ಆಡಂಬರಗಳನ್ನು ಆಚರಿಸಿ, ನೀವು ಆ ಪರಮಾತ್ಮನನ್ನು ಪಡೆಯಲು ಇಚ್ಛಿಸಿ, ಆದರೆ ನೀವು ನಿಮ್ಮೊಳಗಿರುವ ಆಸೆಯ ಜಿಂಕೆಯನ್ನು ಬೇಟೆಯಾಡದಿದ್ದರೆ, ಎಲ್ಲವೂ ವ್ಯರ್ಥ. ಭಾವ ಪರಮಾತ್ಮರು ಈ ಆಸೆಗಳನ್ನು ಮೀರಿದವರು. ಆ ಭೋಗ್ಯಗಳ ಹಂಬಲವು ನಿಮ್ಮೊಳಗೆ ಕೊನೆಗೊಳ್ಳದಿದ್ದರೆ, ನೀವು ಆ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ.
ਸਹਸ ਸਿਆਣਪਾ ਲਖ ਹੋਹਿ ਤ ਇਕ ਨ ਚਲੈ ਨਾਲਿ ॥ ಸಹಸ್ ಸಿಯಾಣಪಾ ಲಖ್ ಹೋಹಿ ತ ಇಕ್ ನ ಚಲೈ ನಾಲಿ || ಒಬ್ಬನಿಗೆ ಸಾವಿರಾರು ಮತ್ತು ಲಕ್ಷಾಂತರ ಬುದ್ಧಿವಂತ ವಿಚಾರಗಳಿರಬಹುದು, ಆದರೆ ಅವನು ಅಹಂನಿಂದ ಕೂಡಿರುವ ಕಾರಣ, ಇವೆಲ್ಲವೂ ಎಂದಿಗೂ ಪರಮಾತ್ಮನನ್ನು ತಲುಪಲು ಸಹಾಯ ಮಾಡುವುದಿಲ್ಲ.
ਕਿਵ ਸਚਿਆਰਾ ਹੋਈਐ ਕਿਵ ਕੂੜੈ ਤੁਟੈ ਪਾਲਿ ॥ ಕಿವ್ ಸಚಿಯಾರಾ ಹೋಯಿಐ ಕಿವ್ ಕೂಡೈ ತುಟೈ ಪಾಲಿ || ಹಾಗಾದರೆ ದೇವರ ಮುಂದೆ ಸತ್ಯದ ಬೆಳಕಿನ ಕಿರಣಹೇಗಾಗಬಹುದು?, ನಮ್ಮ ಮತ್ತು ನಿರಂಕಾರರ ನಡುವಿನ ಸುಳ್ಳಿನ ಗೋಡೆಯನ್ನು ಹೇಗೆ ಒಡೆಯಬಹುದು? ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ
ਹੁਕਮਿ ਰਜਾਈ ਚਲਣਾ ਨਾਨਕ ਲਿਖਿਆ ਨਾਲਿ ॥੧॥ ಹುಕಮಿ ರಜಾಯಿ ಚಲಣಾ ನಾನಕ್ ಲಿಖಿಯಾ ನಾಲಿ.|| ೧ || ಶ್ರೀ ಗುರುನಾನಕ್ ದೇವ್ ಜಿ ಅವರು ಸತ್ಯ ರೂಪವನ್ನು ಪಡೆಯುವ ಮಾರ್ಗವನ್ನು ವಿವರಿಸುತ್ತಾರೆ - ಲೌಕಿಕ ಜೀವಿಯು ದೇವರ ಆದೇಶವನ್ನು ಅನುಸರಿಸುವ ಮೂಲಕ ಮಾತ್ರ ಇವೆಲ್ಲವನ್ನೂ ಮಾಡಬಹುದು ಎಂದು ಸೃಷ್ಟಿಯ ಪ್ರಾರಂಭದಿಂದಲೂ ಬರೆಯಲಾಗಿದೆ. ॥1॥
ਹੁਕਮੀ ਹੋਵਨਿ ਆਕਾਰ ਹੁਕਮੁ ਨ ਕਹਿਆ ਜਾਈ ॥ ಹುಕಮಿ ಹೋವನಿ ಆಕಾರ್ ಹುಕಮು ನ ಕಹಿಯಾ ಜಾಯಿ || ಎಲ್ಲಾ ದೇಹಗಳು (ಬ್ರಹ್ಮಾಂಡದ ಸೃಷ್ಟಿಯಲ್ಲಿ) ( ನಿರಂಕಾರರ) ಆದೇಶದಿಂದ ರಚಿಸಲ್ಪಟ್ಟಿವೆ, ಆದರೆ ಅವರ ಆದೇಶವನ್ನು ಬಾಯಿಯಿಂದ ಪದಗಳನ್ನು ತೆಗೆದುಕೊಂಡು ವಿವರಿಸಲಾಗುವುದಿಲ್ಲ.
ਹੁਕਮੀ ਹੋਵਨਿ ਜੀਅ ਹੁਕਮਿ ਮਿਲੈ ਵਡਿਆਈ ॥ ಹುಕ್ಮಿ ಹೋವನಿ ಜಿಯಾ ಹುಕ್ಮಿ ಮಿಲೈ ವಡಿಯಾಈ ॥ ಪರಮಾತ್ಮನ ಆದೇಶದ ಮೇರೆಗೆ (ಈ ಭೂಮಿಯ ಮೇಲೆ), ಅನೇಕಾನೇಕ ಯೋನಿಗಳಲ್ಲಿ ಜೀವಗಳ ಸೃಜನವಾಗುತ್ತದೆ ಮತ್ತು ಗೌರವವನ್ನು (ಅಥವಾ ಉನ್ನತನಿಕೃಷ್ಟ ಸ್ಥಾನಮಾನ) ಅವನ ಆದೇಶದಿಂದ ಮಾತ್ರ ಸಾಧಿಸಲಾಗುತ್ತದೆ.
ਹੁਕਮੀ ਉਤਮੁ ਨੀਚੁ ਹੁਕਮਿ ਲਿਖਿ ਦੁਖ ਸੁਖ ਪਾਈਅਹਿ ॥ ಹುಕಾಮಿ ಉತ್ಮು ನೀಚು ಹುಕಮಿ ಲಿಖಿ ದುಃಖ ಸುಖ ಪಾಯಿಆಹಿ || ಪರಮಾತ್ಮನ (ವಾಹೆಗುರು) ಆದೇಶದಿಂದ ಆತ್ಮವು ಮೇಲು ಅಥವಾ ಕೀಳು ಜೀವನವನ್ನು ಪಡೆಯುತ್ತದೆ,ಅವನುಬರೆದ ಆದೇಶದಿಂದ ಆತ್ಮವು ಸಂತೋಷ ಮತ್ತು ದುಃಖವನ್ನು ಅನುಭವಿಸುತ್ತದೆ.
ਇਕਨਾ ਹੁਕਮੀ ਬਖਸੀਸ ਇਕਿ ਹੁਕਮੀ ਸਦਾ ਭਵਾਈਅਹਿ ॥ ಇಕ್ನಾ ಹುಕಮಿ ಬಖ್ಸೀಸ್ ಇಕಿ ಹುಕಮಿ ಸದಾ ಭಾವಾಯಿಆಹಿ || ಅನೇಕ ಜೀವಿಗಳು ದೇವರ ಆದೇಶದಿಂದ ಮಾತ್ರ ಅನುಗ್ರಹವನ್ನು ಪಡೆಯುತ್ತವೆ, ಅನೇಕರು ಅವನ ಆದೇಶದಿಂದ ಚಲನೆಯ ಚಕ್ರದಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ.
ਹੁਕਮੈ ਅੰਦਰਿ ਸਭੁ ਕੋ ਬਾਹਰਿ ਹੁਕਮ ਨ ਕੋਇ ॥ ಹುಕ್ಮೈ ಅಂದರಿ ಸಭು ಕೋ ಬಾಹರಿ ಹುಕಂ ನ ಕೋಯಿ || ಆ ಪರಮ ಶಕ್ತಿಯಾದ ಪರಮಾತ್ಮನ ನಿಯಂತ್ರಣದಲ್ಲಿ ಎಲ್ಲವೂ ಇರುತ್ತದೆ, ಅವರಿಂದ ಹೊರಗೆ ಜಗತ್ತಿನಲ್ಲಿ ಯಾವುದೇ ಕೆಲಸವಿಲ್ಲ.
ਨਾਨਕ ਹੁਕਮੈ ਜੇ ਬੁਝੈ ਤ ਹਉਮੈ ਕਹੈ ਨ ਕੋਇ ॥੨॥ ನಾನಕ್ ಹುಕ್ಮೈ ಜೇ ಬುಝೈ ತಾ ಹೌಮೈ ಕಹೈ ನ ಕೋಯಿ ॥2॥ ಹೇ ನಾನಕ್! ಜೀವಿಯು ಆ ಅಕಾಲ ಪುರುಷರ ಆದೇಶವನ್ನು ಪ್ರಸನ್ನ ಚಿತ್ತರಾಗಿ ತಿಳಿದರೆ, ಆಗ ಯಾರೂ ಅಹಂಕಾರಭರಿತ 'ನಾನು' ಎಂಬ ಅಹಂ ಭಾವದ ನಿಯಂತ್ರಣದಲ್ಲಿರುವುದಿಲ್ಲ. ಈ ಅಹಂ ಭಾವವು ಲೌಕಿಕ ವೈಭವದಲ್ಲಿ ತೊಡಗಿರುವ ಜೀವಿಯನ್ನು ನಿರಂಕಾರರಹತ್ತಿರ ಬರಲು ಬಿಡುವುದಿಲ್ಲ.
ਗਾਵੈ ਕੋ ਤਾਣੁ ਹੋਵੈ ਕਿਸੈ ਤਾਣੁ ॥ ಗಾವೈ ಕೋ ತಾಣು ಹೋವೇ ಕಿಸೈ ತಾಣು॥ (ದೇವರ ಕೃಪೆಯಿಂದ ಮಾತ್ರ) ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿರುವ ಯಾರಾದರೂ ಆ (ಸರ್ವಶಕ್ತ) ಶಕ್ತಿಯ ಮಹಿಮೆಯನ್ನು ಹಾಡಬಹುದು.
ਗਾਵੈ ਕੋ ਦਾਤਿ ਜਾਣੈ ਨੀਸਾਣੁ ॥ ಗಾವೈ ಕೋ ದಾತಿ ಜಾನೈ ನೀಸಾಣು || ಕೆಲವರು ಅವರು ನೀಡಿದ ಆಶೀರ್ವಾದವನ್ನು ಅವರ ಕೃಪೆ ಎಂದು ಪರಿಗಣಿಸಿ ಅವರ ಕೀರ್ತಿಯನ್ನು ಕೊಂಡಾಡುತ್ತಿದ್ದಾರೆ.
ਗਾਵੈ ਕੋ ਗੁਣ ਵਡਿਆਈਆ ਚਾਰ ॥ ಗಾವೈ ಕೋ ಗುಣ ವಡಿಆಯಿಆ ಚಾರ್ || ಇನ್ನಾವುದೋ ಒಂದು ಜೀವಿ ಅವರ ವಿವರಿಸಲಾಗದ ಗುಣಗಳನ್ನು ಮತ್ತು ವೈಭವವನ್ನು ಹಾಡುತ್ತಿದೆ.
ਗਾਵੈ ਕੋ ਵਿਦਿਆ ਵਿਖਮੁ ਵੀਚਾਰੁ ॥ ಗಾವೈ ಕೋ ವಿದಿಆ ವಿಖಮು ವೀಚಾರು || ಕೆಲವರು ಅವರ ವ್ಯತಿರಿಕ್ತ ಆಲೋಚನೆಗಳ (ಜ್ಞಾನದ) ಹಾಡನ್ನು ವಿದ್ಯೆಯ ಮೂಲಕ ಹಾಡುತ್ತಿದ್ದಾರೆ.
ਗਾਵੈ ਕੋ ਸਾਜਿ ਕਰੇ ਤਨੁ ਖੇਹ ॥ ಗಾವೈ ಕೋ ಸಾಜಿ ಕರೆ ತನು ಖೆಹ್ || ಕೆಲವರು ಸೃಷ್ಟಿಕರ್ತ ಮತ್ತು ವಿನಾಶಕ ದೇವರ ರೂಪವನ್ನು ತಿಳಿದು ಅವರನ್ನು ಸ್ತುತಿಸುತ್ತಾರೆ.
ਗਾਵੈ ਕੋ ਜੀਅ ਲੈ ਫਿਰਿ ਦੇਹ ॥ ಗವೈ ಕೋ ಜಿಯಾ ಲೈ ಫಿರಿ ದೆಹ್ ॥ ಆ ಪರಮ ಶಕ್ತಿಯು ಜೀವವನ್ನು ನೀಡುತ್ತದೆ ಮತ್ತು ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ ಎಂದು ಕೆಲವರು ಅವರನ್ನು ವರ್ಣಿಸುತ್ತಾರೆ
ਗਾਵੈ ਕੋ ਜਾਪੈ ਦਿਸੈ ਦੂਰਿ ॥ ಗಾವೈ ಕೋ ಜಾಪೈ ದಿಸೈ ದೂರಿ || ಇನ್ನಾವುದೋ ಒಂದು ಜೀವಿ ನಿರಂಕಾರರು ತನ್ನಿಂದ ದೂರವಿರುವರೆಂದು ತಿಳಿದು ಅವರ ಯಶಗೀತೆಯನ್ನು ಹಾಡುತ್ತದೆ.


© 2025 SGGS ONLINE
error: Content is protected !!
Scroll to Top