Page 5
ਨਾਨਕ ਆਖਣਿ ਸਭੁ ਕੋ ਆਖੈ ਇਕ ਦੂ ਇਕੁ ਸਿਆਣਾ ॥
ನಾನಕ್ ಆಖಣಿ ಸಭು ಕೋ ಆಖೈ ಇಕ್ ದೂ ಇಕು ಸಿಆಣಾ ||
ಹೇಳಿಕೊಳ್ಳಲು ಪ್ರತಿಯೊಬ್ಬರೂ ಇನ್ನೊಬ್ಬರಿಗಿಂತ ಹೆಚ್ಚು ಬುದ್ಧಿವಂತರಂತೆ ಆ ಪರಮಾತ್ಮನನ್ನು ಶ್ಲಾಘಿಸುತ್ತಾರೆ ಎಂದು ಸತ್ಗುರು ಜೀ ಹೇಳುತ್ತಾರೆ.
ਵਡਾ ਸਾਹਿਬੁ ਵਡੀ ਨਾਈ ਕੀਤਾ ਜਾ ਕਾ ਹੋਵੈ ॥
ವಡಾ ಸಾಹಿಬು ವಡೀ ನಾಯಿ ಕೀತಾ ಜಾ ಕಾ ಹೋವೈ ||
ಆದರೆ ದೇವರು ದೊಡ್ಡವರು, ಅವರ ಹೆಸರು ಅವರಿಗಿಂತ ದೊಡ್ಡದು, ವಿಶ್ವದಲ್ಲಿ ಏನಾಗುತ್ತಿದೆಯೋ ಅದು ಅವರ ಕಾರ್ಯದಿಂದಲೇ ನಡೆಯುತ್ತಿದೆ.
ਨਾਨਕ ਜੇ ਕੋ ਆਪੌ ਜਾਣੈ ਅਗੈ ਗਇਆ ਨ ਸੋਹੈ ॥੨੧॥
ನಾನಕ್ ಜೆ ಕೋ ಆಪೌ ಜಾನೈ ಅಗೈ ಗಇಯಾ ನ ಸೋಹೈ || ೨೧||
ಹೇ ನಾನಕ್! ಅವರ ಗುಣಗಳನ್ನು ತಿಳಿದುಕೊಳ್ಳುವ ಬಗ್ಗೆ ಯಾರಾದರೂ ಹೇಳಿದರೆ, ಆ ವ್ಯಕ್ತಿ ಪರಲೋಕದಲ್ಲಿ ಕೀರ್ತಿಯನ್ನು ಪಡೆಯುವುದಿಲ್ಲ. ಅದೇನೆಂದರೆ ಜೀವಿಯು ಆ ಅಚಲ ನಿರಂಕಾರರ ಗುಣಾತ್ಮಕ ರಹಸ್ಯಗಳನ್ನು ತಿಳಿದಿರುವ ಬಗ್ಗೆ ಹೆಮ್ಮೆ ಪಟ್ಟರೆ ಅವನಿಗೆ ಇಹಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಗೌರವ ಸಿಗುವುದಿಲ್ಲ.॥ 21 ॥
ਪਾਤਾਲਾ ਪਾਤਾਲ ਲਖ ਆਗਾਸਾ ਆਗਾਸ ॥
ಪಾತಾಲಾ ಪಾತಾಲ್ ಲಖ್ ಆಗಾಸಾ ಆಗಾಸ್ ||
ಸದ್ಗುರು ಜಿ ಅವರು ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ಏಳು ಸ್ವರ್ಗ ಮತ್ತು ಏಳು ಪಾತಾಳಗಳ ಅಸ್ತಿತ್ವದ ಸಂದೇಹವನ್ನು ಹೋಗಲಾಡಿಸುತ್ತಾರೆ ಮತ್ತು ಪ್ರಪಂಚದ ಸೃಷ್ಟಿಯಲ್ಲಿ ಲಕ್ಷಾಂತರ ಭೂಗತ ಲೋಕಗಳಿವೆ ಮತ್ತು ಲಕ್ಷಾಂತರ ಆಕಾಶದ ಮೇಲೆ ಆಕಾಶಗಳಿವೆ ಎಂದು ಹೇಳುತ್ತಾರೆ.
ਓੜਕ ਓੜਕ ਭਾਲਿ ਥਕੇ ਵੇਦ ਕਹਨਿ ਇਕ ਵਾਤ ॥
ಓಡಕ್ ಓಡಕ್ ಭಾಲಿ ಥಕೆ ವೇದ್ ಕಹನಿ ಇಕ್ ವಾತ್ ||
ಇದೇ ವಿಷಯವನ್ನು ವೇದಗಳಲ್ಲಿಯೂ ಹೇಳಲಾಗಿದೆ, ಹುಡುಕುವವರು ಅದನ್ನು ಕೊನೆಯವರೆಗೂ ಹುಡುಕಿ ಸುಸ್ತಾಗುತ್ತಾರೆ ಆದರೆ ಯಾರೂ ಅದರ ಅಂತ್ಯವನ್ನು ಕಂಡುಕೊಂಡಿಲ್ಲ.
ਸਹਸ ਅਠਾਰਹ ਕਹਨਿ ਕਤੇਬਾ ਅਸੁਲੂ ਇਕੁ ਧਾਤੁ ॥
ಸಹಸ್ ಅಠಾರಹ್ ಕಹನಿ ಕತೆಬಾ ಅಸಲೂ ಇಕು ಘಾತು ||
ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿ, ಹದಿನೆಂಟು ಸಾವಿರ ಲೋಕಗಳಿವೆ ಎಂದು ಹೇಳಲಾಗಿದೆ, ಆದರೆ ವಾಸ್ತವದಲ್ಲಿ ಅವುಗಳ ಮೂಲವು ಅವುಗಳ ಸೃಷ್ಟಿಕರ್ತರು ಒಬ್ಬ ಪರಮಾತ್ಮ ಮಾತ್ರ.
ਲੇਖਾ ਹੋਇ ਤ ਲਿਖੀਐ ਲੇਖੈ ਹੋਇ ਵਿਣਾਸੁ ॥
ಲೇಖಾ ಹೋಯ್ ತ ಲಿಖೀಎಯ್ ಲೇಖೈ ಹೋಯ್ ವಿಣಾಸು ||
ಅವರ ಸೃಷ್ಟಿಯ ಗಾತ್ರವನ್ನು ಅಂದಾಜು ಮಾಡಲು ಅಥವಾ ಲೆಕ್ಕಹಾಕಲು ಸಾಧ್ಯವಿಲ್ಲ ಮತ್ತು ಇದು ಯಾವುದೇ ಮಾನವ ಲೆಕ್ಕಾಚಾರವನ್ನು ಮೀರಿದೆ.
ਨਾਨਕ ਵਡਾ ਆਖੀਐ ਆਪੇ ਜਾਣੈ ਆਪੁ ॥੨੨॥
ನಾನಕ್ ವಡಾ ಆಖೀಎಯ್ ಆಪೈ ಜಾಣೈ ಆಪು || ೨೨ ||
ಹೇ ನಾನಕ್! ಈ ಇಡೀ ಜಗತ್ತಿನಲ್ಲಿ ಶ್ರೇಷ್ಠ ಎಂದು ಕರೆಯಲ್ಪಡುವ ಸೃಷ್ಟಿಕರ್ತರು ತಮ್ಮನ್ನು ತಾವೇ ತಿಳಿದಿದ್ದಾರೆ ಅಥವಾ ತಮ್ಮನ್ನು ತಾವೇ ತಿಳಿದುಕೊಳ್ಳಬಹುದು.|| 22 ||
ਸਾਲਾਹੀ ਸਾਲਾਹਿ ਏਤੀ ਸੁਰਤਿ ਨ ਪਾਈਆ ॥
ಸಾಲಾಹೀ ಸಾಲಾಹಿ ಏತೀ ಸುರತಿ ನ ಪಾಯಿಅ ||
ಆ ದೇವರನ್ನು ಕೊಂಡಾಡುವ ಭಕ್ತರೂ ಆ ದೇವರನ್ನು ಸ್ತುತಿಸಿ ಅವರ ಮಿತಿಯನ್ನು ಕಂಡುಕೊಳ್ಳಲಿಲ್ಲ.
ਨਦੀਆ ਅਤੈ ਵਾਹ ਪਵਹਿ ਸਮੁੰਦਿ ਨ ਜਾਣੀਅਹਿ ॥
ನಾದಿಯಾ ಆತೈ ವಾಹ್ ಪವಹಿ ಸಮುಂದಿ ನ ಜಾಣಿಅಹಿ ॥
ಸಾಗರವನ್ನು ಸೇರುವ ನದಿಗಳು ಮತ್ತು ಅದರ ತಳವಿಲ್ಲದ ಅಂತ್ಯವನ್ನು ಕಂಡುಕೊಳ್ಳಲಾರವು, ಆದರೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ, ಹಾಗೆಯೇ ಹೊಗಳುವವರು ಹೊಗಳುತ್ತಲೇ ಅದರಲ್ಲಿ ಮುಳುಗುತ್ತಾರೆ.
ਸਮੁੰਦ ਸਾਹ ਸੁਲਤਾਨ ਗਿਰਹਾ ਸੇਤੀ ਮਾਲੁ ਧਨੁ ॥
ಮುಂದ್ ಸಾಹ ಸುಲ್ತಾನ್ ಗಿರ್ಹಾ ಸೇತಿ ಮಾಲು ಧನು ||
ಸಾಗರಗಳ ರಾಜ ಮತ್ತು ಚಕ್ರವರ್ತಿ, ಪರ್ವತದಂತಹ ಹೋಲಿಸಲಾಗದ ಸಂಪತ್ತಿನ ಒಡೆಯನಾಗಿದ್ದರೂ,
ਕੀੜੀ ਤੁਲਿ ਨ ਹੋਵਨੀ ਜੇ ਤਿਸੁ ਮਨਹੁ ਨ ਵੀਸਰਹਿ ॥੨੩॥
ಕೀಡಿ ತುಲಿ ನ ಹೋವನಿ ಜೆ ತಿಸು ಮನಹು ನ ವೀಸ್ರಹಿ ||೨೩||
ಅವನ ಮನಸ್ಸಿನಿಂದ ದೇವರನ್ನು ಮರೆಯದಿದ್ದರೆ ಅವನು ಆ ಇರುವೆಯಂತೆಯೂ ಇರಲು ಸಾಧ್ಯವಿಲ್ಲ.॥23॥
ਅੰਤੁ ਨ ਸਿਫਤੀ ਕਹਣਿ ਨ ਅੰਤੁ ॥
ಅಂತು ನ ಸಿಫತೀ ಕಹಣಿ ನ ಅಂತು ||
ಆ ನಿರಂಕಾರರನ್ನು ಹೊಗಳುವುದಕ್ಕೆ ಮಿತಿಯಿಲ್ಲ ಮತ್ತು ಹೇಳಿದರೂ ಅವನ ಹೊಗಳಿಕೆಗೆ ಕೊನೆಯಿಲ್ಲ.
ਅੰਤੁ ਨ ਕਰਣੈ ਦੇਣਿ ਨ ਅੰਤੁ ॥
ಅಂತು ನ ಕರಣೈ ದೇನಿ ನ ಅಂತು ॥
ಸೃಷ್ಟಿಕರ್ತರು ಸೃಷ್ಟಿಸಿದ ಸೃಷ್ಟಿಗೆ ಅಂತ್ಯವಿಲ್ಲ, ಆದರೆ ಅವರು ಕೊಟ್ಟಾಗ, ಅದಕ್ಕೆ ಅಂತ್ಯವಿಲ್ಲ.
ਅੰਤੁ ਨ ਵੇਖਣਿ ਸੁਣਣਿ ਨ ਅੰਤੁ ॥
ಅಂತು ನ ವೇಖಣಿ ಸುಣಾಣಿ ನ ಅಂತು ||
ಅವರ ನೋಡುವಿಕೆ ಮತ್ತು ಕೇಳುವಿಕೆಗೆ ಅಂತ್ಯವಿಲ್ಲ, ಅಂದರೆ, ಅವರು ಎಲ್ಲವನ್ನೂ ನೋಡುವ ಮತ್ತು ಎಲ್ಲವನ್ನೂ ಕೇಳುವ ನಿರಂಕಾರರಾಗಿದ್ದಾರೆ.
ਅੰਤੁ ਨ ਜਾਪੈ ਕਿਆ ਮਨਿ ਮੰਤੁ ॥
ಅಂತು ನ ಜಾಪೈ ಕಿಆ ಮನಿ ಮಂತು ||
ದೇವರ ಹೃದಯದ ರಹಸ್ಯವೇನು, ಅದನ್ನು ಅರ್ಥಮಾಡಿಕೊಳ್ಳಲು ಸಹ ಸಾಧ್ಯವಿಲ್ಲ.
ਅੰਤੁ ਨ ਜਾਪੈ ਕੀਤਾ ਆਕਾਰੁ ॥
ಅಂತು ನ ಜಾಪೈ ಕೀತಾ ಆಕಾರು ॥
ಅವರಿಂದ ಆದ ಈ ಸೃಷ್ಟಿಯ ವಿಸ್ತರಣೆಯ ಪ್ರಮಾಣ ಅಥವಾ ಅವಧಿಯನ್ನು ತಿಳಿಯಲಾಗುವುದಿಲ್ಲ.
ਅੰਤੁ ਨ ਜਾਪੈ ਪਾਰਾਵਾਰੁ ॥
ಅಂತು ನ ಜಾಪೈ ಪಾರಾವಾರು ॥
ಅವರ ಆರಂಭ ಮತ್ತು ಅಂತ್ಯವನ್ನು ಸಹ ತಿಳಿಯಲಾಗುವುದಿಲ್ಲ.
ਅੰਤ ਕਾਰਣਿ ਕੇਤੇ ਬਿਲਲਾਹਿ ॥
ಅಂತ್ ಕಾರಣಿ ಕೇತೆ ಬಿಲಲಾಹಿ ||
ಅನೇಕ ಜೀವಿಗಳು ಅವರ ಅಂತ್ಯವನ್ನು ಪಡೆಯಲು ಕೂಗುತ್ತಿವೆ.
ਤਾ ਕੇ ਅੰਤ ਨ ਪਾਏ ਜਾਹਿ ॥
ತಾ ಕೆ ಅಂತ್ ನ ಪಾಯೆ ಜಾಹಿ ||
ಆದರೆ ಆ ಅಳೆಯಲಾಗದ, ಶಾಶ್ವತವಾದ ಅಕಾಲ ಪುರುಷರ ಅಂತ್ಯವನ್ನು ಕಂಡುಹಿಡಿಯಲಾಗುವುದಿಲ್ಲ.
ਏਹੁ ਅੰਤੁ ਨ ਜਾਣੈ ਕੋਇ ॥
ಎಹು ಅಂತು ನ ಜಾಣೈ ಕೋಯ್ ||
ಅವರ ಗುಣಗಳು ಎಲ್ಲಿ ಕೊನೆಗೊಳ್ಳುತ್ತವೆ ಎಂದು ಯಾರಿಗೂ ತಿಳಿದಿಲ್ಲ.
ਬਹੁਤਾ ਕਹੀਐ ਬਹੁਤਾ ਹੋਇ ॥
ಬಹುತಾ ಕಹೀಎಯ್ ಬಹುತಾ ಹೋಯ್ ||
ಆ ಪರಬ್ರಹ್ಮರ ಹೊಗಳಿಕೆ, ಸ್ತುತಿ, ಗಾತ್ರ ಅಥವಾ ಗುಣಗಳನ್ನು ಎಷ್ಟು ಹೇಳಲಾಗುತ್ತದೆಯೋ ಅಷ್ಟು ಅವು ಹೆಚ್ಚು ಆಗುತ್ತವೆ.
ਵਡਾ ਸਾਹਿਬੁ ਊਚਾ ਥਾਉ ॥
ವಡಾ ಸಾಹಿಬು ಊಚಾ ಥಾಉ ॥
ನಿರಂಕಾರರು ಸರ್ವೋತ್ತಮರು, ಅವರ ಸ್ಥಾನ ಸರ್ವಶ್ರೇಷ್ಠವಾಗಿದೆ.
ਊਚੇ ਉਪਰਿ ਊਚਾ ਨਾਉ ॥
ಊಚೆ ಉಪರಿ ಊಚಾ ನಾಉ ||
ಆದರೆ ಆ ಸರ್ವೋತ್ತಮ ನಿರಂಕಾರರ ಹೆಸರೇ ಮಹೋನ್ನತವಾಗಿದೆ.
ਏਵਡੁ ਊਚਾ ਹੋਵੈ ਕੋਇ ॥
ಎವಡು ಊಚಾ ಹೋವೈ ಕೋಯಿ ||
ಅವನಿಗಿಂತ ದೊಡ್ಡ ಅಥವಾ ಹೆಚ್ಚಿನ ಶಕ್ತಿ ಇದ್ದರೆ,
ਤਿਸੁ ਊਚੇ ਕਉ ਜਾਣੈ ਸੋਇ ॥
ತಿಸು ಊಚೆ ಕಉ ಜಾಣೈ ಸೋಯಿ ||
ಅದು ಮಾತ್ರ ಆ ಸರ್ವಶ್ರೇಷ್ಠ ಪರಮಾತ್ಮರನ್ನು ತಿಳಿಯಬಲ್ಲದು.
ਜੇਵਡੁ ਆਪਿ ਜਾਣੈ ਆਪਿ ਆਪਿ ॥
ಜೇವಡು ಆಪಿ ಜಾಣೈ ಆಪಿ ಆಪ್ ||
ನಿರಂಕಾರರು ಸ್ವತಃ ತನ್ನ ಸರ್ವಸ್ವವನ್ನೂ ತಿಳಿದಿದ್ದಾರೆ ಅಥವಾ ತಿಳಿಯಬಲ್ಲರು, ಬೇರೆ ಯಾರೂ ಅಲ್ಲ
ਨਾਨਕ ਨਦਰੀ ਕਰਮੀ ਦਾਤਿ ॥੨੪॥
ನಾನಕ್ ನದರಿ ಕರಮಿ ದಾತಿ ॥24॥
ಆ ಕೃಪಾಸಾಗರರು ಜೀವಿಗಳ ಮೇಲೆ ಕರುಣೆ ತೋರಿಅವರ ಕಾರ್ಯಗಳಿಗೆ ಅನುಗುಣವಾಗಿ ಎಲ್ಲಾ ವಸ್ತುಗಳನ್ನು ನೀಡುತ್ತಾರೆ ಎಂದು ಸತ್ಗುರು ಗುರು ನಾನಕ್ ದೇವ್ ಜಿ ಹೇಳುತ್ತಾರೆ. ॥ 24॥
ਬਹੁਤਾ ਕਰਮੁ ਲਿਖਿਆ ਨਾ ਜਾਇ ॥
ಬಹುತಾ ಕರಮು ಲಿಖಿಆ ನ ಜಾಈ ॥
ಅವರ ಆಶೀರ್ವಾದ ಎಷ್ಟಿದೆ ಎಂದರೆ ಅವರನ್ನು ವರ್ಣಿಸವ ಸಾಮರ್ಥ್ಯ ಯಾರಿಗೂ ಇಲ್ಲ.
ਵਡਾ ਦਾਤਾ ਤਿਲੁ ਨ ਤਮਾਇ ॥
ವಡಾ ದಾತಾ ತಿಲು ನ ತಮಾಈ ||
ಅವರು ಅನೇಕರಿಗೆ ಬಕ್ಷೀಸು ನೀಡುವವನಾದ್ದರಿಂದ ಅವನು ಶ್ರೇಷ್ಠ ರಾಗಿದ್ದಾರೆ ,ಆದರೆ ಅವರಲ್ಲಿ ದುರಾಸೆಯ ಕುರುಹು ಕೂಡ ಇಲ್ಲ.
ਕੇਤੇ ਮੰਗਹਿ ਜੋਧ ਅਪਾਰ ॥
ಕೇತೆ ಮಾಂಗಹಿ ಜೊಧ್ ಅಪಾರ್ ||
ಅನೇಕ ಅಸಂಖ್ಯಾತ ಯೋಧರು ಅವರ ಕೃಪೆಗಾಗಿ ಹಾತೊರೆಯುತ್ತಾರೆ.
ਕੇਤਿਆ ਗਣਤ ਨਹੀ ਵੀਚਾਰੁ ॥
ಕೇತಿಆ ಗಣತ್ ನಹೀ ವೀಚಾರು ||
ಅವರ ಸಂಖ್ಯೆಯ ಪ್ರಶ್ನೆಯೇ ಇಲ್ಲ.
ਕੇਤੇ ਖਪਿ ਤੁਟਹਿ ਵੇਕਾਰ ॥
ಕೇತೇ ಖಪಿ ತುಟಹಿ ವೇಕಾರ್ ॥
ಅನೇಕ ಮಾನವರು ನಿರಂಕಾರರು ನೀಡಿದ ವಸ್ತುಗಳನ್ನು ದುಶ್ಚಟಗಳಿಗಾಗಿ ಅನುಭವಿಸಲು ಹೋರಾಡುತ್ತಾ ಸಾಯುತ್ತಾರೆ.
ਕੇਤੇ ਲੈ ਲੈ ਮੁਕਰੁ ਪਾਹਿ ॥
ಕೇತೆ ಲೈ ಲೈ ಮುಖರು ಪಾಹಿ ||
ಅನೇಕರು ಅಕಾಲ ಪುರುಷರು ನೀಡಿದ ವಸ್ತುಗಳನ್ನು ತೆಗೆದುಕೊಂಡಿರುವುದನ್ನು ನಿರಾಕರಿಸುತ್ತಾರೆ.
ਕੇਤੇ ਮੂਰਖ ਖਾਹੀ ਖਾਹਿ ॥
ಕೇತೆ ಮೂರಖ್ ಖಾಹಿ ಖಾಹಿ ||
ಅನೇಕ ಮೂರ್ಖರು ದೇವರಿಂದ ಆಹಾರವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾರೆ, ಅದನ್ನು ಎಂದಿಗೂ ಅವರನ್ನು ನೆನಪಿಸಿಕೊಳ್ಳುವುದಿಲ್ಲ.
ਕੇਤਿਆ ਦੂਖ ਭੂਖ ਸਦ ਮਾਰ ॥
ಕೇತಿಯಾ ದೂಖ್ ಭೂಖ್ ಸದ್ ಮಾರ್ ॥
ಅನೇಕರು ಯಾವಾಗಲೂ ದುಃಖ ಮತ್ತು ಹಸಿವಿನಿಂದ ಬಳಲುತ್ತಿರುತ್ತಾರೆ, ಏಕೆಂದರೆ ಅದು ಅವರ ಕರ್ಮದಲ್ಲಿಯೇ ಬರೆಯಲ್ಪಟ್ಟಿದೆ.
ਏਹਿ ਭਿ ਦਾਤਿ ਤੇਰੀ ਦਾਤਾਰ ॥
ಏಹಿ ಭೀ ದಾತಿ ತೇರಿ ದಾತಾರ್ ॥
ಆದರೆ ಸಜ್ಜನರು ಇಂತಹ ಹೊಡೆತಗಳನ್ನು ಆ ದೇವರ ಆಶೀರ್ವಾದ ಎಂದೇ ಪರಿಗಣಿಸುತ್ತಾರೆ.
ਬੰਦਿ ਖਲਾਸੀ ਭਾਣੈ ਹੋਇ ॥
ಬಂದಿ ಖಲಾಸಿ ಭಾಣೈಹೋಯ್ ||
ಈ ತೊಂದರೆಗಳಿಂದಲೇ ಮಾನವನಿಗೆ ವಾಹೆಗುರುವಿನ ನೆನಪಾಗುವುದು.
ਹੋਰੁ ਆਖਿ ਨ ਸਕੈ ਕੋਇ ॥
ಹೋರು ಆಖಿ ನ ಸಕೈ ಕೋಯ್ ||
ಮನುಷ್ಯನು ಭಗವಂತನ ಆಜ್ಞೆಯಲ್ಲಿ ಉಳಿಯುವುದರಿಂದ ಮಾತ್ರ ಭ್ರಮೆ ಮತ್ತು ಮೋಹದ ಬಂಧನದಿಂದ ಹೊರಬರಲು ಸಾಧ್ಯ.
ਜੇ ਕੋ ਖਾਇਕੁ ਆਖਣਿ ਪਾਇ ॥
ಜೆ ಕೋ ಖಾಯಿಕು ಆಖಣಿ ಪಾಯ್ ||
ಇದಕ್ಕೆ ಬೇರೆ ವಿಧಾನವಿದೆಯೆಂದು ಯಾರೂ ಹೇಳಲು ಸಾಧ್ಯವಿಲ್ಲ; ಅದೇನೆಂದರೆ ಭ್ರಮೆಯ ಬಂಧನದಿಂದ ಮುಕ್ತಿ ಹೊಂದಲು ಭಗವಂತನ ಆಜ್ಞಾನುಸಾರವಾಗಿ ಬದುಕುವುದನ್ನು ಬಿಟ್ಟು ಬೇರೆ ಯಾವುದೇ ವಿಧಾನವನ್ನು ಯಾರೂ ಹೇಳಲಾರರು.
ਓਹੁ ਜਾਣੈ ਜੇਤੀਆ ਮੁਹਿ ਖਾਇ ॥
ಓಹು ಜಾಣೈ ಜೆತೀಆ ಮುಹಿ ಖಾಯ್ ||
ಅಜ್ಞಾನದಿಂದ ಒಬ್ಬ ವ್ಯಕ್ತಿಯು ಅದರ ಬಗ್ಗೆ ಹೇಳಿಕೆ ನೀಡಲು ಪ್ರಯತ್ನಿಸಿದರೆ, ಅವನ ಮುಖದ ಮೇಲೆ ಯಮ ಮತ್ತು ಇತರರಿಂದ ಎಷ್ಟು ಗಾಯಗಳಾಗಿವೆ ಎಂದು ಅವನಿಗೆ ಮಾತ್ರ ತಿಳಿಯುತ್ತದೆ.
ਆਪੇ ਜਾਣੈ ਆਪੇ ਦੇਇ ॥
ಆಪೈ ಜಾಣೈಆಪೆ ದೆಡ್ ||
ಭಗವಂತ ಪ್ರಪಂಚದ ಎಲ್ಲಾ ಜೀವಿಗಳ ಅಗತ್ಯಗಳನ್ನು ತಿಳಿದಿದ್ದಾರೆ ಮತ್ತು ಅವುಗಳನ್ನು ಸ್ವತಃ ಒದಗಿಸುತ್ತಾರೆ.
ਆਖਹਿ ਸਿ ਭਿ ਕੇਈ ਕੇਇ ॥
ಆಖಾಹಿ ಸಿ ಭಿ ಕೆಈ ಕೆಯ್ ||
ಜಗತ್ತಿನ ಎಲ್ಲ ಜೀವಿಗಳು ಕೃತಘ್ನರಲ್ಲ, ಈ ಮಾತನ್ನು ನಂಬುವ ಅನೇಕ ಜನರಿದ್ದಾರೆ.
ਜਿਸ ਨੋ ਬਖਸੇ ਸਿਫਤਿ ਸਾਲਾਹ ॥
ಜಿಸ್ ನೊ ಬಖಸೆ ಸಿಫತಿ ಸಾಲಾಹ್ ||
ದೇವರು ಪ್ರಸನ್ನರಾಗಿ ಯಾವ ವ್ಯಕ್ತಿಗೆ ತನ್ನ ಸ್ತುತಿಯನ್ನು ಹಾಡುವ ಶಕ್ತಿಯನ್ನು ನೀಡುತ್ತಾರೆಯೋ
ਨਾਨਕ ਪਾਤਿਸਾਹੀ ਪਾਤਿਸਾਹੁ ॥੨੫॥
ನಾನಕ್ ಪಾತಿಸಾಹಿ ಪಾತಿಸಾಹು || 25 ||
ಹೇ ನಾನಕ್! ಅವನು ರಾಜರ ರಾಜರೂ ಆಗುತ್ತಾರೆ; ಅಂದರೆ, ಅವರಿಗೆ ಉನ್ನತ ಮತ್ತು ಪರಿಪೂರ್ಣ ಸ್ಥಾನ ದೊರೆಯುತ್ತದೆ.॥ 25 ॥
ਅਮੁਲ ਗੁਣ ਅਮੁਲ ਵਾਪਾਰ ॥
ಅಮುಲ್ ಗುಣ್ ಅಮುಲ್ ವಾಪಾರ್ ||
ನಿರಂಕಾರರ ಅವರ್ಣನೀಯ ಗುಣಗಳು ಅಮೂಲ್ಯವಾಗಿವೆ, ಈ ನಿರಂಕಾರರಸ್ಮರಣೆಯೇ ಅಮೂಲ್ಯ ವ್ಯವಹಾರವಾಗಿದೆ.
ਅਮੁਲ ਵਾਪਾਰੀਏ ਅਮੁਲ ਭੰਡਾਰ ॥
ಅಮುಲ್ ವಾಪಾರಿಯೇ ಅಮುಲ್ ಭಂಡಾರ್ ||
ಸ್ಮರಣೆ ರೂಪದ ಈ ವ್ಯಾಪಾರಕ್ಕೆ ಮಾರ್ಗದರ್ಶನ ನೀಡುವ ಸಂತರು ಸಹ ವ್ಯಾಪಾರಸ್ಥರಾಗಿದ್ದಾರೆ ಮತ್ತು ಆ ಸಂತರಲ್ಲಿರುವ ಪುಣ್ಯಗಳ ಭಂಡಾರವೂ ಅಮೂಲ್ಯವಾಗಿದೆ.
ਅਮੁਲ ਆਵਹਿ ਅਮੁਲ ਲੈ ਜਾਹਿ ॥
ಅಮುಲ್ ಆವಾಹಿ ಅಮುಲ್ ಲೈ ಜಾಹಿ ||
ದೇವರೊಂದಿಗೆ ಐಕ್ಯವಾಗಲು ಈ ಸಂತರ ಬಳಿಗೆ ಬರುವ ಜನರು ಸಹ ಅಮೂಲ್ಯರು ಮತ್ತು ಅವರಿಂದ ಪಡೆಯುವ ಸದ್ಗುಣಗಳು ಸಹ ಅಮೂಲ್ಯವಾಗಿದೆ..
ਅਮੁਲ ਭਾਇ ਅਮੁਲਾ ਸਮਾਹਿ ॥
ಅಮುಲ್ ಭಾಯಿ ಅಮುಲಾ ಸಮಾಹಿ ||
ಗುರು-ಸಿಖ್ ಪರಸ್ಪರ ಪ್ರೀತಿ ಅಮೂಲ್ಯವಾಗಿದೆ, ಗುರುವಿನ ಪ್ರೀತಿಯಿಂದ ಆತ್ಮಕ್ಕೆ ಸಿಗುವ ಆನಂದವೂ ಅಮೂಲ್ಯವಾಗಿದೆ.
ਅਮੁਲੁ ਧਰਮੁ ਅਮੁਲੁ ਦੀਬਾਣੁ ॥
ಅಮುಲು ಧರಮು ಅಮುಲು ದೀಬಾಣು ॥
ಅಕಾಲ್-ಪುರುಷರ ನ್ಯಾಯವೂ ಅಮೂಲ್ಯ, ಅವರ ನ್ಯಾಯಾಲಯವೂ ಅಮೂಲ್ಯವಾಗಿದೆ
ਅਮੁਲੁ ਤੁਲੁ ਅਮੁਲੁ ਪਰਵਾਣੁ ॥
ಅಮುಲು ತುಲು ಅಮುಲು ಪರ್ವಾಣು ॥
ಅಕಾಲ ಪುರುಷರ ತೀರ್ಪಿನ ಪ್ರಮಾಣವು ಅಮೂಲ್ಯವಾದುದು ಮತ್ತು ಜೀವಿಗಳ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಅಳೆಯುವ ಮಾಪಕ (ತೂಕ) ಸಹ ಅಮೂಲ್ಯವಾಗಿದೆ.
ਅਮੁਲੁ ਬਖਸੀਸ ਅਮੁਲੁ ਨੀਸਾਣੁ ॥
ಅಮುಲು ಬಖ್ಸೀಸ್ ಅಮುಲು ನೀಸಾಣು ॥
ಅಕಾಲ ಪುರುಷ ಒದಗಿಸಿದ ಪದಾರ್ಥಗಳೂ ಅಮೂಲ್ಯವಾದುದು ಮತ್ತು ಆ ಪದಾರ್ಥಗಳ ಸಂಕೇತವೂ ಅಮೂಲ್ಯವಾಗಿದೆ.
ਅਮੁਲੁ ਕਰਮੁ ਅਮੁਲੁ ਫੁਰਮਾਣੁ ॥
ಅಮುಲು ಕರಮು ಅಮುಲು ಫುರ್ಮಾಣು ||
ಜೀವಿಗಳ ಮೇಲಿನ ನಿರಂಕಾರರ ಕೃಪೆಯೂ ಅಮೂಲ್ಯವಾದುದು ಮತ್ತು ಅವರ ಆದೇಶವೂ ಅಮೂಲ್ಯವಾಗಿದೆ
ਅਮੁਲੋ ਅਮੁਲੁ ਆਖਿਆ ਨ ਜਾਇ ॥
ಅಮುಲೋ ಅಮುಲು ಆಖಿಆ ನ ಜಾಯಿ ||
ಆ ದೇವರು ಅತ್ಯಮೂಲ್ಯವಾದವರು, ಅವರ ಕಥನವನ್ನು ನಿಖರವಾಗಿ ವಿವರಿಸಲು ಅಸಾಧ್ಯ.
ਆਖਿ ਆਖਿ ਰਹੇ ਲਿਵ ਲਾਇ ॥
ಆಖಿ ಆಖಿ ರಹೇ ಲಿವ್ ಲಾಯಿ ||
ಆದರೆ ಇನ್ನೂ ಅನೇಕ ಭಕ್ತರು ಭೂತ, ಭವಿಷ್ಯತ್ ಮತ್ತು ವರ್ತಮಾನದಲ್ಲಿ ಅವರ ಗುಣಗಳ ಕುರಿತು ಉಪನ್ಯಾಸ ಮಾಡುತ್ತಾ, ಅಂದರೆ ಅವರನ್ನು ಸ್ತುತಿಸುತ್ತಾ ಅವರಲ್ಲಿ ಮಗ್ನರಾಗುತ್ತಿದ್ದಾರೆ.
ਆਖਹਿ ਵੇਦ ਪਾਠ ਪੁਰਾਣ ॥
ಆಖಹಿ ವೇದ್ ಪಾಠ ಪುರಾಣ್ ||
ನಾಲ್ಕು ವೇದಗಳು ಮತ್ತು ಹದಿನೆಂಟು ಪುರಾಣಗಳಲ್ಲಿ ಅವರ ಮಹಿಮೆಯನ್ನು ಉಲ್ಲೇಖಿಸಲಾಗಿದೆ.
ਆਖਹਿ ਪੜੇ ਕਰਹਿ ਵਖਿਆਣ ॥
ಆಖಹಿ ಪಡೆ ಕರಹಿ ವಖಿಆಣ್ ||
ಅವುಗಳನ್ನು ಓದಿದವರು ಸಹ ಅಕಾಲ-ಪುರುಷರ ಬಗ್ಗೆ ಉಪನ್ಯಾಸವನ್ನು ನೀಡುತ್ತಾರೆ.
ਆਖਹਿ ਬਰਮੇ ਆਖਹਿ ਇੰਦ ॥
ಆಖಹಿ ಬರ್ಮೆ, ಆಖಹಿ ಇಂದ್ ||
ಸೃಷ್ಟಿಕರ್ತ ಬ್ರಹ್ಮ ಮತ್ತು ಸ್ವರ್ಗದ ಅಧಿಪತಿ ಇಂದ್ರ ಕೂಡ ಅವರ ಅಮೂಲ್ಯ ಗುಣಗಳನ್ನು ವರ್ಣಿಸುತ್ತಾರೆ.