Page 9
ਗਾਵਨਿ ਤੁਧਨੋ ਜਤੀ ਸਤੀ ਸੰਤੋਖੀ ਗਾਵਨਿ ਤੁਧਨੋ ਵੀਰ ਕਰਾਰੇ ॥
ಗಾವನಿ ತುಧನೋ, ಜತಿ ಸತಿ ಸಂತೋಖಿ ಗಾವನಿ ತುಧನೋ, ವೀರ್ ಕರಾರೇ ॥
ಯತಿಗಳು, ಸತ್ಯವಂತರೂ ಸಂತೃಪ್ತರೂ ನಿಮ್ಮನ್ನು ಹೊಗಳುತ್ತಿದ್ದಾರೆ ಮತ್ತು ಧೈರ್ಯಶಾಲಿಗಳೂ ನಿಮ್ಮ ಗುಣಗಳನ್ನು ಹೊಗಳುತ್ತಿದ್ದಾರೆ.
ਗਾਵਨਿ ਤੁਧਨੋ ਪੰਡਿਤ ਪੜਨਿ ਰਖੀਸੁਰ ਜੁਗੁ ਜੁਗੁ ਵੇਦਾ ਨਾਲੇ ॥
ಗಾವನಿ ತುಧನೋ ಪಂಡಿತ ಪಡನಿ ರಾಖೀಸುರ್ ಜುಗ್ ಜುಗ್ ವೇದಾ ನಾಲೇ ||
ಯುಗಯುಗಾಂತರಗಳಿಂದ ವೇದಾಧ್ಯಯನದ ಮೂಲಕ ವಿದ್ವಾಂಸರು ಮತ್ತು ಋಷಿಮುನಿಗಳು ಇತ್ಯಾದಿ ನಿಮ್ಮ ಕೀರ್ತಿಯನ್ನು ತಿಳಿಸುತ್ತಿದ್ದಾರೆ.
ਗਾਵਨਿ ਤੁਧਨੋ ਮੋਹਣੀਆ ਮਨੁ ਮੋਹਨਿ ਸੁਰਗੁ ਮਛੁ ਪਇਆਲੇ ॥
ಗಾವನಿ ತುಧನೋ ಮೋಹಣಿಆ ಮನು ಮೋಹನಿ ಸುರಗು ಮಛು ಪಾಯಿಆಲೇ ॥
ಮೋಡಿಮಾಡುವ ಮಹಿಳೆಯರು ಸ್ವರ್ಗ, ಮರಣ ಮತ್ತು ಪಾತಾಳಲೋಕದಲ್ಲಿ ನಿಮ್ಮನ್ನು ಸ್ತುತಿಸುತ್ತಿದ್ದಾರೆ.
ਗਾਵਨਿ ਤੁਧਨੋ ਰਤਨ ਉਪਾਏ ਤੇਰੇ ਅਠਸਠਿ ਤੀਰਥ ਨਾਲੇ ॥
ಗಾವನಿ ತುಧನೋ ರತನ್ ಉಪಾಯೇ ತೆರೆ ಆಠ್ಸಠಿ ತೀರಥ್ ನಾಲೇ ||
ನೀವು ಸೃಷ್ಟಿಸಿದ ಹದಿನಾಲ್ಕು ರತ್ನಗಳು ಮತ್ತು ಜಗತ್ತಿನ ಅರವತ್ತೆಂಟು ತೀರ್ಥಗಳೂ ನಿಮ್ಮನ್ನು ಸ್ತುತಿಸುತ್ತಿವೆ.
ਗਾਵਨਿ ਤੁਧਨੋ ਜੋਧ ਮਹਾਬਲ ਸੂਰਾ ਗਾਵਨਿ ਤੁਧਨੋ ਖਾਣੀ ਚਾਰੇ ॥
ಗಾವನಿ ತುಧನೋ ಜೋಧ್ ಮಹಾಬಲ್ ಸೂರ ಗಾವನಿ ತುಧನೋ ಖಾಣಿ ಚಾರೇ ||
ಯೋಧರು, ಪರಾಕ್ರಮಿಗಳು ಮತ್ತು ಧೈರ್ಯಶಾಲಿಗಳು ಸಹ ನಿಮ್ಮ ಸ್ತುತಿಯನ್ನು ಹಾಡುತ್ತಿದ್ದಾರೆ, ಎಲ್ಲಾ ನಾಲ್ಕು ಉತ್ಪತ್ತಿಯ ಮೂಲಗಳು ಸಹ ನಿಮ್ಮ ಸ್ತುತಿಯನ್ನು ಹಾಡುತ್ತಿವೆ.
ਗਾਵਨਿ ਤੁਧਨੋ ਖੰਡ ਮੰਡਲ ਬ੍ਰਹਮੰਡਾ ਕਰਿ ਕਰਿ ਰਖੇ ਤੇਰੇ ਧਾਰੇ ॥
ಗಾವನಿ ತುಧನೋ ಖಂಡ ಮಂಡಲ ಬ್ರಹ್ಮಾಂಡ ಕರಿ ಕರಿ ರಖೇ ತೇರೇ ಧಾರೇ ॥
ಈ ಜಗತ್ತಿನಲ್ಲಿ ನೀವು ಸೃಷ್ಟಿಸಿ ಸ್ಥಾಪಿಸಿದ ನವಖಂಡ, ದ್ವೀಪ ಮತ್ತು ಬ್ರಹ್ಮಾಂಡ ಇತ್ಯಾದಿಯ ಜೀವಿಗಳೂ ಸಹ ನಿಮ್ಮ ಗುಣಗಾನವನ್ನು ಹಾಡುತ್ತಿವೆ.
ਸੇਈ ਤੁਧਨੋ ਗਾਵਨਿ ਜੋ ਤੁਧੁ ਭਾਵਨਿ ਰਤੇ ਤੇਰੇ ਭਗਤ ਰਸਾਲੇ ॥
ಸೇಯಿ ತುಧನೋ ಗಾವನಿ ಜೋ ತುಧು ಭಾವನಿ ರತೆ ತೆರೆ ಭಗತ್ ರಸಾಲೇ ||
ನೀವು ಇಷ್ಟಪಡುವ ಮತ್ತು ನಿಮ್ಮ ಪ್ರೇಮದಲ್ಲಿ ಮಗ್ನರಾಗಿರುವ ಆ ಭಕ್ತರೇ ನಿಮ್ಮನ್ನು ಹಾಡಿ ಹೊಗಳುತ್ತಾರೆ.
ਹੋਰਿ ਕੇਤੇ ਤੁਧਨੋ ਗਾਵਨਿ ਸੇ ਮੈ ਚਿਤਿ ਨ ਆਵਨਿ ਨਾਨਕੁ ਕਿਆ ਬੀਚਾਰੇ ॥
ಹೋರಿ ಕೇತೆ ತುಧನೋ ಗಾವನಿಸೆ ಮೈ ಚಿತಿನ ಆವನಿ ನಾನಕು ಕೀಅ ಬೀಚಾರೆ ||
ಇನ್ನೂ ಅನೇಕರು ನಿಮ್ಮನ್ನು ಹೊಗಳುತ್ತಿದ್ದಾರೆ,ಅವರು ನಮ್ಮ ಆಲೋಚನೆಯಲ್ಲಿ ಬರುತ್ತಿಲ್ಲ.
ਸੋਈ ਸੋਈ ਸਦਾ ਸਚੁ ਸਾਹਿਬੁ ਸਾਚਾ ਸਾਚੀ ਨਾਈ ॥
ಸೋಯಿ ಸೋಯಿ ಸದಾ ಸಚು ಸಾಹಿಬು ಸಾಚಾ ಸಾಚಿ ನಾಯಿ ||
ಶ್ರೀ ಗುರುನಾನಕ್ ದೇವ್ ಜಿ, ಅವರ ಬಗ್ಗೆ ನಾನು ಏನು ಯೋಚಿಸಬೇಕು, ಎಂದು ಹೇಳುತ್ತಾರೆ.
ਹੈ ਭੀ ਹੋਸੀ ਜਾਇ ਨ ਜਾਸੀ ਰਚਨਾ ਜਿਨਿ ਰਚਾਈ ॥
ಹೈ ಭೀ ಹೋಸಿ ಜಾಯಿ ನ ಜಾಸಿ ರಚನ ಜಿನಿ ರಚಾಯಿ ||
ಸತ್ಯ ಸ್ವರೂಪ ನಿರಂಕಾರರು ಭೂತಕಾಲದಲ್ಲೂ ಇದ್ದರು ಮತ್ತು ಆ ಸತ್ಯ ಸಮ್ಮಾನ ಉಳ್ಳವರು ಈಗಲೂ ಇದ್ದಾರೆ
ਰੰਗੀ ਰੰਗੀ ਭਾਤੀ ਕਰਿ ਕਰਿ ਜਿਨਸੀ ਮਾਇਆ ਜਿਨਿ ਉਪਾਈ ॥
ರಂಗಿ ರಂಗಿ ಬಾತಿ ಕರಿ ಕರಿ ಜಿನಸಿ ಮಾಇಯಾ ಜಿನಿ ಉಪಾಯಿ ||
ಮತ್ತೆ ಭವಿಷ್ಯದಲ್ಲಿಯೂ ಅದೇ ನಿಜವಾದ ರೂಪ ಇರುತ್ತದೆ, ಈ ಬ್ರಹ್ಮಾಂಡವನ್ನು ಸೃಷ್ಟಿಸಿದವರುನಾಶವಾಗಿಲ್ಲ ಅಥವಾ ನಾಶವಾಗುವುದಿಲ್ಲ.
ਕਰਿ ਕਰਿ ਦੇਖੈ ਕੀਤਾ ਆਪਣਾ ਜਿਉ ਤਿਸ ਦੀ ਵਡਿਆਈ ॥
ಕರಿ ಕರಿ ದೆಖೈ ಕೀತಾ ಆಪಣಾ ಜಿಉ ತಿಸ್ ದೀ ವಡಿಆಯಿ ||
ಪ್ರಾಣಿಗಳು, ಪಕ್ಷಿಗಳು ಇತ್ಯಾದಿಗಳನ್ನು ವಿವಿಧ ರೀತಿಯ ಬಣ್ಣಗಳಿಂದ ಮತ್ತು ವಿವಿಧ ರೀತಿಯ ಮಾಯೆಯಿಂದ ಸೃಷ್ಟಿಸಿದ ಆ ಸೃಷ್ಟಿಕರ್ತ ಪರಮಾತ್ಮರು, ತನ್ನ ಇಚ್ಛೆಯ ಪ್ರಕಾರ ಅವರು ಸೃಷ್ಟಿಸಿದ ಜಗತ್ತನ್ನು ನೋಡುತ್ತಾರೆ.
ਜੋ ਤਿਸੁ ਭਾਵੈ ਸੋਈ ਕਰਸੀ ਫਿਰਿ ਹੁਕਮੁ ਨ ਕਰਣਾ ਜਾਈ ॥
ಜೋ ತಿಸು ಭಾವೈ ಸೋಯಿ ಕರಸಿ ಫಿರಿ ಹುಕ್ಮು ನ ಕರ್ಣಾ ಜಾಯಿ ||
ಅವರು ತಮಗೆ ಇಷ್ಟವಾದದ್ದನ್ನು ಮಾಡುತ್ತಾರೆ, ಮತ್ತೆ ಅವರಿಗೆ ಅಜ್ಞಾಪಿಸುವಂತವರು ಯಾರೂ ಇಲ್ಲ.
ਸੋ ਪਾਤਿਸਾਹੁ ਸਾਹਾ ਪਤਿਸਾਹਿਬੁ ਨਾਨਕ ਰਹਣੁ ਰਜਾਈ ॥੧॥
ಸೋ ಪತಿಸಾಹು ಸಾಹಾ ಪತಿಸಾಹಿಬ್ ನಾನಕ್ ರಹಣು ರಜಾಯಿ ||೧
ಹೇ ನಾನಕ್! ಅವರು ರಾಜರ ರಾಜ, ಅವರ ಅಧೀನದಲ್ಲಿ ಉಳಿಯುವುದೇ ಸೂಕ್ತ. ॥1॥
ਆਸਾ ਮਹਲਾ ੧ ॥
ಆಸಾ ಮಹಾಲಾ
ಆಸಾ ಮಹಲಾ 1 ||
ਸੁਣਿ ਵਡਾ ਆਖੈ ਸਭੁ ਕੋਇ ॥
ಸುಣಿ ವಡಾ ಆಖೈ ಸಭು ಕೋಯಿ ||
ಹೇ ನಿರಂಕಾರ ಸ್ವರೂಪ! (ಶಾಸ್ತ್ರಗಳು ಮತ್ತು ವಿದ್ವಾಂಸರಿಂದ) ಕೇಳಿದ ನಂತರ, ಎಲ್ಲರೂ ನಿಮ್ಮನ್ನು ಶ್ರೇಷ್ಠ ಎಂದು ಕರೆಯುತ್ತಾರೆ.
ਕੇਵਡੁ ਵਡਾ ਡੀਠਾ ਹੋਇ ॥
ಕೆವಡು ವಡಾ ಡೀಠಾ ಹೋಯಿ ||
ಆದರೆ ನೀವು ಎಷ್ಟು ದೊಡ್ಡವರು, ಯಾರಾದರೂ ನಿಮ್ಮನ್ನು ನೋಡಿದ್ದರೆ ಅಥವಾ ನಿಮ್ಮ ದರ್ಶನ ಪಡೆದಿದ್ದರೆ ಮಾತ್ರ ಹೇಳಬಹುದು.
ਕੀਮਤਿ ਪਾਇ ਨ ਕਹਿਆ ਜਾਇ ॥
ಕೀಮತಿ ಪಾಯಿ ನ ಕಹಿಆ ಜಾಯಿ ||
ವಾಸ್ತವವಾಗಿ, ಆ ಸಗುಣ ಸ್ವರೂಪ ದೇವರ ಮೌಲ್ಯವನ್ನು ಯಾರೂ ಅಂದಾಜು ಮಾಡಲು ಸಾಧ್ಯವಿಲ್ಲ, ಅಥವಾ ಯಾರೂ ಅವರ ಅಂತ್ಯವನ್ನು ಹೇಳಲು ಸಾಧ್ಯವಿಲ್ಲ, ಏಕೆಂದರೆ ಅವರು ಅನಂತ ಮತ್ತು ಮಿತಿಯಿಲ್ಲದವನಾಗಿದ್ದಾರೆ.
ਕਹਣੈ ਵਾਲੇ ਤੇਰੇ ਰਹੇ ਸਮਾਇ ॥੧॥
ಕಹಣೈ ವಾಲೆ ತೆರೆ ರಹೇ ಸಮಾಯಿ ||೧||
ನಿಮ್ಮ ಮಹಿಮೆಯ ಅಂತ್ಯವನ್ನು ಕಂಡುಕೊಂಡವರು, ಅಂದರೆ ನಿಮ್ಮ ಸಚ್ಚಿದಾನಂದ ಸ್ವರೂಪವನ್ನು ತಿಳಿದವರು, ನಿಮ್ಮಲ್ಲಿ ಅವಿಭಾಜ್ಯರಾಗುತ್ತಾರೆ. ॥1॥
ਵਡੇ ਮੇਰੇ ਸਾਹਿਬਾ ਗਹਿਰ ਗੰਭੀਰਾ ਗੁਣੀ ਗਹੀਰਾ ॥
ವಡೆ ಮೇರೆ ಸಾಹಿಬಾ ಗಹಿರ್ ಗಂಭೀರಾ ಗುಣಿ ಗಹೀರಾ ||
ಓ ನನ್ನ ಅಕಾಲ ಪುರುಷ! ನೀವು ಸರ್ವೋತ್ತಮರು, ಸ್ಥಿರ ಸ್ವಭಾವದವರು ಮತ್ತು ಸದ್ಗುಣಗಳ ವಾಸಸ್ಥಾನವಾಗಿರುವಿರಿ.
ਕੋਇ ਨ ਜਾਣੈ ਤੇਰਾ ਕੇਤਾ ਕੇਵਡੁ ਚੀਰਾ ॥੧॥ ਰਹਾਉ ॥
ಕೋಯಿ ನ ಜಾಣೈ ತೇರೆ ಕೇತಾ ಕೆವಡು ಚೀರಾ ||೧|| ರಹಾಉ ||
ನೀವು ಎಷ್ಟು ವಿಶಾಲವಾಗಿರುವಿರಿ ಎಂಬ ಸತ್ಯದ ಜ್ಞಾನ ಯಾರಿಗೂ ಇಲ್ಲ ॥1॥ರಹಾವು ॥
ਸਭਿ ਸੁਰਤੀ ਮਿਲਿ ਸੁਰਤਿ ਕਮਾਈ ॥
ಸಭಿ ಸುರತಿ ಮಿಲಿ ಸುರತಿ ಕಮಾಯಿ ||
ಎಲ್ಲಾ ಧ್ಯಾನಸ್ಥ ವ್ಯಕ್ತಿಗಳು ಒಟ್ಟಿಗೆ ಸೇರಿ ಚರ್ಚೆ ನಡೆಸಿದರು.
ਸਭ ਕੀਮਤਿ ਮਿਲਿ ਕੀਮਤਿ ਪਾਈ ॥
ಸಭಿ ಕೀಮತಿ ಮಿಲಿ ಕೀಮತಿ ಪಾಯಿ ||
ವಿದ್ವಾಂಸರೆಲ್ಲರೂ ಸೇರಿ ನಿಮ್ಮ ಅಂತ್ಯವನ್ನು ತಿಳಿಯಲು ಪ್ರಯತ್ನಿಸಿದರು.
ਗਿਆਨੀ ਧਿਆਨੀ ਗੁਰ ਗੁਰਹਾਈ ॥
ಗಿಯಾನಿ ಧಿಯಾನಿ ಗುರ್ ಗುರ್ಹಾಯಿ ||
ಶಾಸ್ತ್ರವೇತ, ಪ್ರಾಣಾಯಾಮಿ, ಗುರು ಮತ್ತು ಗುರುಗಳ ಗುರು
ਕਹਣੁ ਨ ਜਾਈ ਤੇਰੀ ਤਿਲੁ ਵਡਿਆਈ ॥੨॥
ಕಹಣು ನ ಜಾಯಿ ತೇರಿ ತಿಲು ವಡಿಆಯಿ ॥2॥
ನಿಮ್ಮ ಮಹಿಮೆಯ ಲೇಷ ಮಾತ್ರ ವರ್ಣನೆಯೂ ಸಾಧ್ಯವಿಲ್ಲ ॥ 2॥
ਸਭਿ ਸਤ ਸਭਿ ਤਪ ਸਭਿ ਚੰਗਿਆਈਆ ॥
ಸಭೀ ಸತ್ ಸಭೀ ತಪ್ ಸಭೀ ಚಂಗಿಆಯಿಯಾ ॥
ಎಲ್ಲಾ ಒಳ್ಳೆಯ ಗುಣಗಳು, ಎಲ್ಲಾ ತಪಸ್ಸು ಮತ್ತು ಎಲ್ಲಾ ಒಳ್ಳೆಯ ಕಾರ್ಯಗಳು
ਸਿਧਾ ਪੁਰਖਾ ਕੀਆ ਵਡਿਆਈਆ ॥
ಸಿಧಾ ಪುರ್ಖಾ ಕೀಆ ವಡಿಆಯಿಯಾ ||
ಸಿದ್ಧ - ಪುರುಷರ ಸಾಧನೆಗೆ ಸಮಾನವಾದ ಶ್ರೇಷ್ಠತೆ
ਤੁਧੁ ਵਿਣੁ ਸਿਧੀ ਕਿਨੈ ਨ ਪਾਈਆ ॥
ತುಧು ವಿನು ಸಿಧಿ ಕಿನೈ ನ ಪಾಯಿಯಾ ॥
ನಿಮ್ಮ ಕೃಪೆಯಿಲ್ಲದೆ ಯಾರೂ ಮೇಲೆ ಹೇಳಿದ ಗುಣಗಳ ಸಿದ್ಧಿಗಳನ್ನು ಪಡೆದಿಲ್ಲ.
ਕਰਮਿ ਮਿਲੈ ਨਾਹੀ ਠਾਕਿ ਰਹਾਈਆ ॥੩॥
ಕರ್ಮಿ ಮಿಲೈ ನಾಹಿ ಠಾಕಿ ರಹಾಯಿಯಾ ॥3॥
ಈ ಶುಭ ಗುಣಗಳು ದೇವರ ಕೃಪೆಯಿಂದ ಪ್ರಾಪ್ತವಾದರೆ ಯಾರೂ ಅದನ್ನು ತಡೆಯಲಾರರು. ॥ 3॥
ਆਖਣ ਵਾਲਾ ਕਿਆ ਵੇਚਾਰਾ ॥
ಆಖಣ್ ವಾಲಾ ಕೀಆ ವೆಚಾರಾ ||
ಓ ಅಕಾಲ ಪುರುಷ ! ನಾನು ನಿಮ್ಮ ಹೊಗಳಿಕೆಯನ್ನು ವರ್ಣಿಸಬಲ್ಲೆಎಂದು ಯಾರಾದರೂ ಹೇಳಿದರೆ, ಈ ಬಡವನು ಏನು ಹೇಳಬಲ್ಲನು?
ਸਿਫਤੀ ਭਰੇ ਤੇਰੇ ਭੰਡਾਰਾ ॥
ಸಿಫತಿ ಭರೇ ತೆರೆ ಭಂಡಾರಾ ||
ಏಕೆಂದರೆ ಓ ದೇವರೇ! ನಿಮ್ಮ ಸ್ತುತಿಯ ಸಂಪತ್ತು ವೇದಗಳಲ್ಲಿ, ಧರ್ಮಗ್ರಂಥಗಳಲ್ಲಿ ಮತ್ತು ನಿಮ್ಮ ಭಕ್ತರ ಹೃದಯಗಳಲ್ಲಿ ತುಂಬಿದೆ.
ਜਿਸੁ ਤੂ ਦੇਹਿ ਤਿਸੈ ਕਿਆ ਚਾਰਾ ॥
ಜಿಸು ತೂ ದೇಹಿ ತಿಸೈ ಕಿಆ ಚಾರಾ ||
ಯಾರಿಗೆ ನಿಮ್ಮನ್ನು ಸ್ತುತಿಸುವ ವಿವೇಕವನ್ನು ನೀವು ಕೊಡುತ್ತೀರೋ, ಅವರೊಂದಿಗೆ ಯಾರು ಏನು ಮಾಡಲೂ ಸಾಧ್ಯವಿಲ್ಲ
ਨਾਨਕ ਸਚੁ ਸਵਾਰਣਹਾਰਾ ॥੪॥੨॥
ನಾನಕ್ ಸಚು ಸವಾರಣ್ಹಾರಾ ॥೪॥೨॥
ಆ ಸತ್ಯ ಸ್ವರೂಪ ದೇವರೇ ಎಲ್ಲರನ್ನೂ ಕಂಗೊಳಿಸುವಂತೆ ಮಾಡುವರು ಎಂದು ಗುರುನಾನಕ್ ಹೇಳುತ್ತಾರೆ
ਆਸਾ ਮਹਲਾ ੧ ॥
ಅಸ ಮಹಾಲ ೧ ॥
ಆಸಾ ಮಹಲಾ 1 ||
ਆਖਾ ਜੀਵਾ ਵਿਸਰੈ ਮਰਿ ਜਾਉ ॥
ಆಖಾ ಜೀವಾ ವಿಸರೈ ಮರಿ ಜಾವು ||
ಹೇ ತಾಯಿ! ನಾವು ಪರಮಾತ್ಮರ ಹೆಸರನ್ನು ಸ್ಮರಿಸುವ ತನಕ ಜೀವಂತವಾಗಿರುತ್ತೇನೆ, ನಾನು ಈ ಹೆಸರನ್ನು ಮರೆತಾಗ, ನನ್ನನ್ನು ನಾನು ಸತ್ತವನೆಂದು ಭಾವಿಸುತ್ತೇನೆ. ಅಂದರೆ ಭಗವಂತನ ಹೆಸರಿನಲ್ಲಿ ಮಾತ್ರ ನನಗೆ ಸಂತೋಷವಾಗುತ್ತದೆ, ಇಲ್ಲದಿದ್ದರೆ ನನಗೆ ದುಃಖವಾಗುತ್ತದೆ.
ਆਖਣਿ ਅਉਖਾ ਸਾਚਾ ਨਾਉ ॥
ಆಖಣಿ ಅಉಖಾ ಸಾಚಾ ನಾವು ||
ಆದರೆ ಈ ನಿಜನಾಮದ ವರ್ಣನೆಯು ತುಂಬಾ ಕಷ್ಟ.
ਸਾਚੇ ਨਾਮ ਕੀ ਲਾਗੈ ਭੂਖ ॥
ಸಾಚೆ ನಾಮ್ ಕಿ ಲಾಗೈ ಭೂಕ್ ||
ಭಗವಂತನ ನಿಜವಾದ ನಾಮದ ಬಯಕೆ (ಹಸಿವು) ಇದ್ದರೆ
ਉਤੁ ਭੂਖੈ ਖਾਇ ਚਲੀਅਹਿ ਦੂਖ ॥੧॥
ಉತು ಭೂಖೈ ಖಾಯಿ ಚಲೀಆಹಿ ದೂಖ್ ||
ಆ ಆಸೆಯೇ ಎಲ್ಲಾ ದುಃಖಗಳನ್ನು ನಾಶಪಡಿಸುತ್ತದೆ. 1॥
ਸੋ ਕਿਉ ਵਿਸਰੈ ਮੇਰੀ ਮਾਇ ॥
ಸೋ ಕಿಉ ವಿಸರೈ ಮೇರಿ ಮಾಯಿ ||
ಆದ್ದರಿಂದ ಓ ತಾಯಿ! ಅಂತಹ ಹೆಸರನ್ನು ನಾನೇಕೆ ಮರೆಯಲಿ.
ਸਾਚਾ ਸਾਹਿਬੁ ਸਾਚੈ ਨਾਇ ॥੧॥ ਰਹਾਉ ॥
ಸಾಚಾ ಸಾಹಿಬು ಸಾಚಾ ನಾಯಿ ॥೧॥ ರಹಾವು
ಆ ಭಗವಂತ ಸತ್ಯ ಮತ್ತು ಅವರ ಹೆಸರೂ ಸತ್ಯ. ॥1॥ ರಹಾವು ॥
ਸਾਚੇ ਨਾਮ ਕੀ ਤਿਲੁ ਵਡਿਆਈ ॥
ಸಾಚೇ ನಾಮ್ ಕಿ ತಿಲು ವಡಿಆಯಿ ॥
ದೇವರ ನಿಜವಾದ ಹೆಸರಿನ ಲೇಷಮಾತ್ರ ಮಹಿಮೆಯನ್ನು
ਆਖਿ ਥਕੇ ਕੀਮਤਿ ਨਹੀ ਪਾਈ ॥
ಅಖಿ ಥಕೆ ಕಿಮತಿ ನಹಿ ಪಾಯಿ ॥
(ವ್ಯಾಸಾದಿ ಮುನಿ) ಹೇಳಿ ಹೇಳಿ ಸುಸ್ತಾಗಿದ್ದರೂ ಅದರ ಮಹತ್ವವನ್ನು ಅರಿಯಲು ಸಾಧ್ಯವಾಗಿಲ್ಲ.
ਜੇ ਸਭਿ ਮਿਲਿ ਕੈ ਆਖਣ ਪਾਹਿ ॥
ಜೇ ಸಭೀ ಮಿಲಿ ಕೈ ಆಖಣ್ ಪಾಹಿ ॥
ಬ್ರಹ್ಮಾಂಡದ ಎಲ್ಲಾ ಜೀವಿಗಳು ಒಟ್ಟಾಗಿ ಪರಮಾತ್ಮನನ್ನು ಸ್ತುತಿಸಿದರೆ
ਵਡਾ ਨ ਹੋਵੈ ਘਾਟਿ ਨ ਜਾਇ ॥੨॥
ವಡಾ ನ ಹೋವೈ ಘಾಟಿ ನ ಜಾಯಿ || ೨ ||
ಹೊಗಳಿಕೆಯಿಂದ ಅವರು ಹೆಚ್ಚುವುದೂ ಇಲ್ಲ, ಟೀಕಿಸುವುದರಿಂದ ಕಡಿಮೆಯಾಗುವುದೂ ಇಲ್ಲ. ॥ 2 ॥
ਨਾ ਓਹੁ ਮਰੈ ਨ ਹੋਵੈ ਸੋਗੁ ॥
ನ ಓಹು ಮರೈ ನ ಹೋವೈ ಸೋಗು ||
ಆ ನಿರಂಕಾರರು ಎಂದಿಗೂ ಸಾಯುವುದಿಲ್ಲ, ದುಃಖಿಸುವುದಿಲ್ಲ.
ਦੇਦਾ ਰਹੈ ਨ ਚੂਕੈ ਭੋਗੁ ॥
ದೇದಾ ರಹೈ ನ ಚೂಕೈ ಭೋಗು ||
ಅವರು ತಮ್ಮ ಖಜಾನೆಯಿಂದ ಎಂದಿಗೂ ಮುಗಿಯದ ಜಲ-ಆಹಾರಾದಿಯನ್ನು ಪ್ರಪಂಚದ ಜೀವಿಗಳಿಗೆ ನೀಡುತ್ತಲೇ ಇರುತ್ತಾರೆ.
ਗੁਣੁ ਏਹੋ ਹੋਰੁ ਨਾਹੀ ਕੋਇ ॥
ಗುಣು ಎಹೋ ಹೋರು ನಾಹಿ ಕೋಯಿ ||
ದಾನೇಶ್ವರ ಪರಮಾತ್ಮನಂಥ ಗುಣಗಳು ಇರುವುದು ಅವರಿಗೆ ಮಾತ್ರ, ಬೇರೆ ಯಾರಿಗೂ ಇಲ್ಲ.
ਨਾ ਕੋ ਹੋਆ ਨਾ ਕੋ ਹੋਇ ॥੩॥
ನ ಕೋ ಹೊಆ ನ ಕೋ ಹೋಯಿ.|| ೩ ||
ಅಂತಹ ದೇವರು ಹಿಂದೆಂದೂ ಇರಲಿಲ್ಲ, ಮುಂದೆಯೂ ಯಾರೂ ಇರುವುದಿಲ್ಲ.॥3॥
ਜੇਵਡੁ ਆਪਿ ਤੇਵਡ ਤੇਰੀ ਦਾਤਿ ॥
ಜೆವಡು ಆಪಿ ತೆವಡ್ ತೆರಿ ದಾತಿ ||
ದೇವರು ಎಷ್ಟು ಶ್ರೇಷ್ಠರೋ, ಅವರ ಬಕ್ಷೀಸುಗಳೂ ಅಷ್ಟೇ ಶ್ರೇಷ್ಠ.